ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರಿನ 4ನೇ ಜೆಎಂಎಫ್‌ಸಿ ನ್ಯಾಯಾಲಯ ಈತನಿಗೆ ವಿಧಿಸಿತು 6 ಕೋಟಿ ರೂ. ದಂಡ: ಕಾರಣ?

ಮಂಗಳೂರು: ನಕಲಿ ಚೆಕ್ ನೀಡಿರುವ ಪ್ರಕರಣವೊಂದು ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯದ ಮೆಟ್ಟಿಲೇರಿದ್ದು, ವಿಚಾರಣೆ ನಡೆಸಿರುವ ನ್ಯಾಯಾಲಯ ಆರೋಪಿಗೆ ಬರೋಬ್ಬರಿ 6 ಕೋಟಿ ರೂ. ದಂಡ ವಿಧಿಸಿ, ತೀರ್ಪು ನೀಡಿದೆ.

ಮಂಗಳೂರಿನ ಬಲ್ಲಾಳ್‌ಬಾಗ್ ನಿವಾಸಿ ಅನಿಲ್ ಹೆಗ್ಡೆ ಶಿಕ್ಷೆಗೊಳಗಾದ ಆರೋಪಿ. ಅನಿಲ್ ಹೆಗ್ಡೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಪದವಿನಂಗಡಿ ಸಮೀಪದ ಮುಗ್ರೋಡಿಯ ಡ್ಯಾನಿ ಆಂಟನಿ ಪಾವ್ಲ್ ಅವರಿಗೆ 5,15,73,798 ರೂ. ಪಾವತಿ ಮಾಡಬೇಕಾಗಿತ್ತು. ಆದ್ದರಿಂದ ಅನಿಲ್ ಹೆಗ್ಡೆ 3 ಕೋಟಿ ರೂ. ಹಾಗೂ 2,15,73,978 ರೂ. ಮೊತ್ತದ ಎರಡು ಚೆಕ್‌ಗಳನ್ನು ನೀಡಿದ್ದರು. ಡ್ಯಾನಿ ಆಂಟನಿ ಪಾವ್ಲ್ ಈ ಚೆಕ್‌ಗಳನ್ನು ಬ್ಯಾಂಕಿಗೆ ಹಾಕಿದ್ದಾರೆ‌. ಬ್ಯಾಂಕ್ ಖಾತೆಯಲ್ಲಿ ಅಷ್ಟೊಂದು ಮೊತ್ತ ಇರದ ಕಾರಣ ಚೆಕ್‌ಗಳು ಅಮಾನ್ಯಗೊಂಡಿದ್ದವು. ಈ ಬಗ್ಗೆ ದೂರುದಾರ ಡ್ಯಾನಿ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಜೆಎಂಎಫ್‌ಸಿ 4ನೇ ನ್ಯಾಯಾಲಯವು ಆರೋಪಿಗೆ ನೆಗೋಷಿಯಬಲ್ ಇನ್‌ಸ್ಟ್ರುಮೆಂಟ್ ಕಾಯ್ದೆ ಪ್ರಕಾರ ಶಿಕ್ಷೆ ವಿಧಿಸಿದೆ. ಆರೋಪಿಯು ಒಟ್ಟು 6,08,57,000 ರೂ. ದಂಡ ಮೊತ್ತ ಪಾವತಿ ಮಾಡಬೇಕು. ಒಂದೊಮ್ಮೆ ದಂಡದ ಮೊತ್ತ ಪಾವತಿಸಲು ತಪ್ಪಿದ್ದಲ್ಲಿ ಆರೋಪಿಯು ಎರಡು ವರ್ಷಗಳ ಸಾದಾ ಸಜೆ ಅನುಭವಿಸಬೇಕೆಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ದಂಡದ ಮೊತ್ತದಲ್ಲಿ 6,08,50,000 ರೂ.ಗಳನ್ನು ದೂರುದಾರರಿಗೆ ಹಾಗೂ 7,000 ರೂ.ನ್ನು ನ್ಯಾಯಾಲಯದ ವೆಚ್ಚವಾಗಿ ಪಾವತಿ ಮಾಡಬೇಕೆಂದು ನ್ಯಾಯಾಲಯ ಆದೇಶಿಸಿದೆ. ದೂರುದಾರರ ಪರವಾಗಿ ನ್ಯಾಯವಾದಿ ಎಂ.ಪಿ. ಶೆಣೈ ವಾದ ಮಂಡಿಸಿದ್ದರು.

Edited By : Nagaraj Tulugeri
Kshetra Samachara

Kshetra Samachara

13/08/2021 09:23 pm

Cinque Terre

15.53 K

Cinque Terre

0

ಸಂಬಂಧಿತ ಸುದ್ದಿ