ಮಂಗಳೂರು: ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಲವೆಡೆ ಕಾರುಗಳ ಗಾಜು ಒಡೆದು ನಗದು, ಬೆಲೆಬಾಳುವ ಸೊತ್ತುಗಳನ್ನು ದೋಚುವ ಉತ್ತರ ಭಾರತದ ಮೂಲದ ದರೋಡೆ ತಂಡವೊಂದು ಸಕ್ರಿಯವಾಗಿದೆ. ಮಂಗಳೂರು ಪೊಲೀಸರಿಂದ ಆರೋಪಿಗಳಿಗೆ ಶೋಧ ಕಾರ್ಯ ನಡೆಯುತ್ತಿದೆ.
ನಗರದ ಉರ್ವಸ್ಟೋರ್ ಮುಡಾ ಕಚೇರಿ ಬಳಿಯಲ್ಲಿ ನಿಲ್ಲಿಸಲಾಗಿರುವ ಕಾರೊಂದರ ಗಾಜು ಒಡೆದು ಲ್ಯಾಪ್‌ಟಾಪ್, ಐಫೋನ್ ಮತ್ತು ಬ್ಯಾಂಕ್‌ಗಳ ಚೆಕ್ ಹಾಳೆಗಳನ್ನು ಕಳವು ಮಾಡಿದೆ. ಅದೇ ರೀತಿ ಬಲ್ಮಠದಲ್ಲಿ ನಿಲ್ಲಿಸಲಾಗಿರುವ ಕಾರೊಂದರ ಗ್ಲಾಸ್ ಮುರಿದ ತಂಡ 40ಸಾವಿರ ರೂ. ಹಣವನ್ನು ಎಗರಿಸಿ ಪರಾರಿಯಾಗಿದೆ. ಇದೇ ರೀತಿ ನಾಲ್ಕು ಕಡೆಗಳಲ್ಲಿ ತಂಡ ಕೃತ್ಯವೆಸಗಿದೆ ಎಂದು ತಿಳಿದು ಬಂದಿದೆ.
ಉತ್ತರ ಭಾರತದ ಗ್ಯಾಂಗ್ ಈ ಕೃತ್ಯದಲ್ಲಿ ಸಕ್ರಿಯವಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ನಗರದ ಜನತೆ ಈ ಬಗ್ಗೆ ಎಚ್ಚರವಹಿಸಬೇಕೆಂದು ಪೊಲೀಸ್ ಇಲಾಖೆ ತಿಳಿಸಿದೆ.
Kshetra Samachara
07/08/2021 11:03 pm