ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ನೇತ್ರಾವತಿ ಸೇತುವೆಯಲ್ಲಿ ಬೈಕ್ ಇಟ್ಟು ಸವಾರ ನಾಪತ್ತೆ- ನದಿಗೆ ಹಾರಿರುವ ಸಂಶಯ

ಬಂಟ್ವಾಳ: ಬಂಟ್ವಾಳದ ನೇತ್ರಾವತಿ ಸೇತುವೆಯಲ್ಲಿ ಬೈಕ್ ಚಾಲನೆಯಲ್ಲಿಟ್ಟು ಬೈಕ್ ಸವಾರ ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಸವಾರ ನದಿಗೆ ಹಾರಿರಬಹುದು ಎಂದು ಸಂಶಯ ವ್ಯಕ್ತವಾಗಿದೆ. ಸ್ಥಳೀಯ ಈಜುಗಾರರು ಸವಾರನ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ.

ಬೆಂಗಳೂರು ದಾಸರಹಳ್ಳಿ ನಿವಾಸಿ ಸತ್ಯವೇಲು (29) ನದಿಗೆ ಹಾರಿದ ಯುವಕ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸತ್ಯವೇಲು, ಈ ಮೊದಲೇ ಇಂಥ ಕೃತ್ಯ ಎಸಗಲು ಇದೇ ಜಾಗಕ್ಕೆ ಬಂದಿದ್ದಾಗ ಸ್ಥಳೀಯರು ರಕ್ಷಿಸಿದ್ದರು. ಬುಧವಾರ ಈತನ ಬೈಕ್ ಪಾಣೆಮಂಗಳೂರು ಸೇತುವೆ ಮೇಲೆ ಕಂಡುಬಂದಿದ್ದು, ಸ್ಥಳೀಯರು ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

ಈತನ ನಾಪತ್ತೆ ಕುರಿತು ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಬಂಟ್ವಾಳದಲ್ಲಿ ಎಲ್ಲಿಗೆ ಹೋದ ಎಂಬುದನ್ನು ಬಂಟ್ವಾಳ ಪೊಲೀಸರು ಶೋಧಿಸುತ್ತಿದ್ದಾರೆ.

Edited By : Vijay Kumar
Kshetra Samachara

Kshetra Samachara

29/07/2021 09:06 am

Cinque Terre

25.15 K

Cinque Terre

1

ಸಂಬಂಧಿತ ಸುದ್ದಿ