ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಪೊಲೀಸರನ್ನು ಕಂಡು ಪರಾರಿಗೆ ಯತ್ನ- ಆಟೋ ಪಲ್ಟಿಯಾಗಿ ಗಾಂಜಾ ಸಮೇತ ಸಿಕ್ಕಿಬಿದ್ದ ಇಬ್ಬರು

ಬಂಟ್ವಾಳ: ವಾಹನದಲ್ಲಿ ಗಾಂಜಾ ಸಾಗಾಟವನ್ನು ಮಾರಾಟಕ್ಕಾಗಿ ಮಾಡುತ್ತಿರುವ ಪ್ರಕರಣವೊಂದನ್ನು ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಪತ್ತೆಹಚ್ಚಿರುವ ಪೊಲೀಸರು ಈ ಸಂಬಂಧ ಇಬ್ಬರನ್ನು ಬಂಧಿಸಿದ್ದು, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸಜಿಪಮೂಡ ಗ್ರಾಮದ ಆಸಿಫ್ ಯಾನೆ ಆಚಿ ಮತ್ತು ಕಡಬದ ಫರಾಝ್ ಎಂಬಿಬ್ಬರು ಬಂಧಿತರು. ವಿಟ್ಲ ಪೊಲೀಸ್ ಠಾಣಾ ನಿರೀಕ್ಷಕರಾದ ನಾಗಾರಾಜ್ ಎಚ್.ಇ ಮತ್ತು ಠಾಣಾ ಸಿಬ್ಬಂದಿ ಪಿಎಸ್ಐ ಮಂಜುನಾಥ, ಹೆಚ್.ಸಿ ಪ್ರಸನ್ನ, ಪಿಸಿ ಪ್ರತಾಪ್, ಮತ್ತು ಪಿಸಿ ಲೋಕೇಶ್, ಹಾಗೂ ಎಪಿಸಿ ಪ್ರವೀಣ್ ಕಾರ್ಯಾಚರಣೆಯ ತಂಡದಲ್ಲಿದ್ದರು.

ವಿಟ್ಲದಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಉಕ್ಕುಡ ಕಡೆಯಿಂದ ವಿಟ್ಲ ಪೇಟೆ ಕಡೆಗೆ ಒಂದು ಆಟೋ ಬರುವುದನ್ನು ಕಂಡ ಪೊಲೀಸರು ಚಾಲಕನಿಗೆ ನಿಲ್ಲಿಸಲು ಸೂಚನೆ ನೀಡಿದ್ದಾರೆ. ಆದರೆ ಚಾಲಕ ಏಕಾಏಕಿ ಆಟೋ ರಿಕ್ಷಾವನ್ನು ತಿರುಗಿಸಿದ ಕಾರಣ ನಿಯಂತ್ರಣ ತಪ್ಪಿ 30 ಅಡಿ ದೂರದಲ್ಲಿ ಉಕ್ಕಡ ಕಡೆಗೆ ಮುಖ ಮಾಡಿ ಮಗುಚಿ ಬಿತ್ತು. ಈ ವೇಳೆ ಪೊಲೀಸರು ರಕ್ಷಣೆಗೆ ಹೋದಾಗ ಆರೋಪಿಗಳು ಸ್ಥಳದಿಂದ ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಇದರಿಂದ ಶಂಕೆ ವ್ಯಕ್ತಪಡಿಸಿದ ಪೊಲೀಸರು ಆರೋಪಿಗಳನ್ನು ಹಿಡಿದು ವಿಚಾರಣೆ ನಡೆಸಿದಾಗ ಗಾಂಜಾ ಸಾಗಾಟ ಬೆಳಕಿಗೆ ಬಂದಿದೆ.

ಪೊಲೀಸರು ಆರೋಪಿಗಳಿಂದ 60,000 ರೂ. ಮೌಲ್ಯ ಸುಮಾರು 2,060 ಗ್ರಾಂ ಗಾಂಜಾ ಹಾಗೂ 1.50 ಲಕ್ಷ ರೂ. ಮೌಲ್ಯದ ಆಟೋ ರಿಕ್ಷಾವನ್ನು ವಶಕ್ಕೆ ಪಡೆದಿದ್ದಾರೆ.

Edited By : Vijay Kumar
Kshetra Samachara

Kshetra Samachara

28/07/2021 12:30 pm

Cinque Terre

13.65 K

Cinque Terre

1

ಸಂಬಂಧಿತ ಸುದ್ದಿ