ಉಡುಪಿ: ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಕುಡಿದ ಮತ್ತಿನಲ್ಲಿ ಪೊಲೀಸರಿಗೆ ಆವಾಜ್ ಹಾಕಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಣಿಪಾಲ ವಿವಿಯ ಎಂಬಿಬಿಎಸ್ ವಿದ್ಯಾರ್ಥಿ ಅನುರಾಗ್ ರೆಡ್ಡಿ ಎಂಬಾತ ಕುಡಿದ ಮತ್ತಿನಲ್ಲಿ ಪೊಲೀಸರೆದುರೇ ರಂಪಾಟ ಮಾಡಿ ಆವಾಜ್ ಹಾಕಿದ ಘಟನೆ ಉಡುಪಿಯ ಕಲ್ಸಂಕದಲ್ಲಿ ನಡೆದಿದೆ.
ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಕ್ಕಾಗಿ ಪೊಲೀಸರು ದಂಡ ವಿಧಿಸಿದಾಗ ದರ್ಪ ತೋರಿದ ವಿದ್ಯಾರ್ಥಿ ನನ್ನ ಅಪ್ಪ ಆಂಧ್ರಪ್ರದೇಶದ ಎಂಪಿಯ ಸ್ನೇಹಿತರು. ಆಂಧ್ರ ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಪ್ತರಾಗಿದ್ದಾರೆ. ಅವರು ಮಾಜಿ ಸಿಎಂ ಸಿದ್ದರಾಮಯ್ಯನವರ ಆಪ್ತರಾಗಿದ್ದಾರೆ. ನಾನು ಯಾವುದೇ ಕಾರಣಕ್ಕೂ ಮೂರು ಸಾವಿರಕ್ಕಿಂತ ಹೆಚ್ಚು ದಂಡವನ್ನು ಕಟ್ಟುವುದಿಲ್ಲ ಎಂದು ವಿದ್ಯಾರ್ಥಿ ದರ್ಪ ತೋರಿದ್ದಾನೆ.
ಸದ್ಯ, ಕರ್ತವ್ಯದಲ್ಲಿದ್ದ ಪೊಲೀಸರು ವಿದ್ಯಾರ್ಥಿಯ ಕಾರನ್ನು ಸೀಜ್ ಮಾಡಿ ಆತನ ಮೇಲೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.
Kshetra Samachara
20/02/2021 10:25 pm