ಮಂಗಳೂರು: ಮಹಿಳೆಯೋರ್ವರು ಖರೀದಿಸಿರುವ ಪೊಟ್ಟಣ ಆಹಾರ ಖಾದ್ಯದಲ್ಲಿ ಜೀವಂತ ಹುಳು ಗೋಚರಿಸಿರುವ ಹಿನ್ನೆಲೆಯಲ್ಲಿ ನಗರದ 'ಚಿಕ್ ಕಿಂಗ್ ಇಟ್ಸ್ ಮೈ ಚಾಯ್ಸ್' ಸಂಸ್ಥೆಗೆ ಇಂದು ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
‘ಚಿಕ್‌ಕಿಂಗ್ ಇಟ್ಸ್ ಮೈ ಚಾಯಿಸ್’ ಆಹಾರ ಸಂಸ್ಥೆಯಿಂದ ಶನಿವಾರ ಸಂಜೆ ಲೇಡಿಹಿಲ್ ಮನೆ ನಿವಾಸಿ ಮಹಿಳೆಯೊಬ್ಬರು ಚಿಕನ್ ಖಾದ್ಯ ಸಹಿತ ಬರ್ಗರ್ ನ್ನು ಪಾರ್ಸೆಲ್ ಆರ್ಡರ್ ಮಾಡಿದ್ದರು. ಪಾರ್ಸೆಲ್ ಬಳಿಕ ಸಂತ್ರಸ್ತ ಮಹಿಳೆ ಸಹಿತ ಮಕ್ಕಳು ಹಾಗೂ ತಾಯಿ ಅಲ್ಪ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿದ್ದಾರೆ. ಈ ಸಂದರ್ಭ ಚಿಕನ್ ಖಾದ್ಯದಲ್ಲಿ ದಿಢೀರ್ ಜೀವಂತ ಹುಳು ಗೋಚರಿಸಿದೆ. ಇದರಿಂದ ಇಡೀ ಕುಟುಂಬವೇ ಆತಂಕಕ್ಕೀಡಾಗಿದೆ. ಈ ಬಗ್ಗೆ ಸಂತ್ರಸ್ತೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದು ‘ಚಿಕ್‌ಕಿಂಗ್ ಇಟ್ಸ್ ಮೈ ಚಾಯಿಸ್’ ಆಹಾರ ಸಂಸ್ಥೆಗೆ ಆರು ಮಂದಿ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭ ಆಹಾರದ ಗುಣಮಟ್ಟವನ್ನು ಪರಿಶೀಲನೆ ನಡೆಸಿದ ಅವರು, ಸಂಸ್ಥೆಯಲ್ಲಿದ್ದ ಕಳಪೆ ಗುಣಮಟ್ಟದ, ಅವಧಿ ಮುಗಿದಿರುವ ಆಹಾರ ಪದಾರ್ಥ ಮುಟ್ಟುಗೋಲು ಹಾಕಿದ್ದಾರೆ. ಈ ಆಹಾರ ಪದಾರ್ಥಗಳನ್ನು ಬಾಕ್ಸ್ ನಲ್ಲಿ ಸೀಲ್ ಹಾಕಿ ಕೊಂಡೊಯ್ಯಲಾಗಿದೆ.
Kshetra Samachara
02/02/2021 06:44 pm