ಉಡುಪಿ: ಹೊಸದಿಲ್ಲಿಯಲ್ಲಿ ನಿನ್ನೆ ಪೊಲೀಸ್ ಸಿಬ್ಬಂದಿ ಮೇಲೆ ಟ್ರ್ಯಾಕ್ಟರ್ ಚಲಾಯಿಸಿ ಹಲ್ಲೆ ನಡೆಸಲು ಯತ್ನಿಸಿದ ಚಿತ್ರಣ ನೀವು ದೃಶ್ಯ ಮಾಧ್ಯಮಗಳಲ್ಲಿ ನೋಡಿ ಪೊಲೀಸರ ಬಗ್ಗೆ ಮರುಕ ಪಟ್ಟಿರಬಹುದು.
ಆದರೆ, ಬುದ್ಧಿವಂತರ ಜಿಲ್ಲೆ ಅದರಲ್ಲೂ ಸಾಹಿತ್ಯ ಲೋಕದ ದಿಗ್ಗಜ ಡಾ. ಕೋಟ ಶಿವರಾಮ ಕಾರಂತರ ಊರಿನ ಪೊಲೀಸ ರು ಅಕ್ಷರಶಃ ಮನುಷ್ಯತ್ವ ಮರೆತು ವರ್ತಿಸಿದ ರೀತಿ ಮಾತ್ರ ಇಡೀ ಇಲಾಖೆಯೇ ತಲೆ ತಗ್ಗಿಸುವಂತದ್ದು.
ಹೌದು, ಸೋಮವಾರ ಕೋಟ ಮೂರುಕೈ ಮೂಲಕ ಸೈಬರ್ ಕಟ್ಟೆ ಗೆ ಔಷಧ ತೆಗೆದುಕೊಂಡು ತಾಯಿ ಶಾರದಾ ಅವರನ್ನು ಬೈಕ್ ನಲ್ಲಿ ಕುಳ್ಳಿರಿಸಿಕೊಂಡು ಪ್ರಶಾಂತ್ ತೆರಳುತ್ತಿದ್ದರು. ಈ ಸಂದರ್ಭ ಚೆಕ್ಕಿಂಗ್ ನೆಪದಲ್ಲಿ ಕರ್ತವ್ಯದಲ್ಲಿದ್ದ ಕೋಟ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಂತೋಷ್ ಬಿ.ಪಿ. ಮತ್ತು ಸ್ಟೇಶನ್ ಎಸ್ ಬಿ ರಾಜು ಅವರು ಪ್ರಶಾಂತ್ ಬೈಕ್ ತಡೆದು ದಾಖಲೆ ಕೇಳಿದ್ದಾರೆ. ಒರಿಜಿನಲ್ ದಾಖಲೆ ಮನೆಯಲ್ಲಿದ್ದ ಕಾರಣ ವಾಹನದ ದಾಖಲೆಯ ಝೆರಾಕ್ಸ್ ನ್ನು ಪ್ರಶಾಂತ್ ಪೊಲೀಸ್ ರಿಗೆ ನೀಡಿದ್ದಾರೆ. ಇದರಿಂದ ಅಸಮಾಧಾನಗೊಂಡ ಪೊಲೀಸ ರು ಪ್ರಶಾಂತ್ ಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಶಾಂತ್ ಗೆ ಕೋಟ ಎಸ್ಸೈ ಮತ್ತು ಎಸ್ ಬಿ ಮನಸೋಇಚ್ಛೆ ಥಳಿಸಿದ್ದಾರೆ. ಇದನ್ನು ತಡೆಯಲು ಬಂದ ಪ್ರಶಾಂತ್ ತಾಯಿ ಶಾರದಾ ಅವರನ್ನೂ ಥಳಿಸಿದ ಕೋಟ ಪೊಲೀಸರು, ಮಗನನ್ನು ಅರೆಸ್ಟ್ ಮಾಡಿ ಕರ್ತವ್ಯ ಲೋಪ ಪ್ರಕರಣ ದಾಖಲಿಸಿದ್ದಾರೆ. ಇತ್ತ ಪೊಲೀಸ್ ರಿಂದ ಥಳಿಸಿಕೊಂಡ ಶಾರದಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸದ್ಯ , ಇದೇ ವಿಚಾರವಾಗಿ ತಾಯಿ ಮಾನವ ಹಕ್ಕುಗಳ ಆಯೋಗಕ್ಕೆ ಮೊರೆ ಹೋಗಿದ್ದಾರೆ. ಯಾವುದೇ ಅಧಿಕಾರವಿಲ್ಲದಿದ್ದರೂ ನನ್ನ ಮತ್ತು ಮಗನ ಮೇಲೆ ಹಲ್ಲೆ ಮಾಡಿದ ಪೊಲೀಸರ ದೌರ್ಜನ್ಯ ಖಂಡಿಸಿದ್ದಾರೆ. ಒಟ್ಟಾರೆಯಾಗಿ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಡಹಗಲೇ ಅನ್ಯಾಯ- ಅಕ್ರಮ ನಡೆಯುತ್ತಿದ್ದರೂ ಕೂಡ ಕಣ್ಣಿಗೆ ಕಾಣದಂತೆ ವರ್ತಿಸುವ ಪೊಲೀಸರು, ಅಸಹಾಯಕ ತಾಯಿ- ಮಗನ ವಿಚಾರದಲ್ಲಿ ಪೌರುಷ ತೋರಿಸಿ ಸುಳ್ಳು ಪ್ರಕರಣ ದಾಖಲಿಸಿರುವ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
Kshetra Samachara
27/01/2021 10:52 am