ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದ.ಕ., ಉಡುಪಿ ಜಿಲ್ಲೆಗಳಲ್ಲಿ ಸೈಬರ್ ಕ್ರೈಮ್ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ!

ಮಂಗಳೂರು: ಕೊರೊನಾ ಲಾಕ್‌ಡೌನ್ ನಂತರ ಮಂಗಳೂರು ನಗರ ಆಯುಕ್ತರ ವ್ಯಾಪ್ತಿಯಲ್ಲಿ ಮಾತ್ರವಲ್ಲ, ಉಡುಪಿ ಜಿಲ್ಲೆಯಲ್ಲೂ ಸೈಬರ್ ಕ್ರೈಮ್ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ!

ಈ ಟೈಮ್ ನಲ್ಲಿ ದ.ಕ. ಜಿಲ್ಲೆಯಲ್ಲಿ 200ಕ್ಕೂ ಅಧಿಕ ಪ್ರಕರಣಗಳು ಮತ್ತು ಉಡುಪಿ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ನಗರದಲ್ಲಿ ಠೇವಣಿದಾರರ ಗಮನಕ್ಕೆ ಬಾರದೆ ಎಟಿಎಂ ಕಾರ್ಡ್‌ ಬಳಸಿಕೊಂಡು ಹಣ ಹಿಂಪಡೆಯುವ ಪ್ರಕರಣ ಹೆಚ್ಚುತ್ತಿವೆ.

ಸೈಬರ್ ಕ್ರೈಮ್ ನಲ್ಲಿ ನಾನಾ ಬಗೆಯ ಅಪರಾಧಗಳಿವೆ. ಬ್ಯಾಂಕಿಂಗ್ ವಿವರ ಪಡೆದು ಹಣ ಲಪಟಾಯಿಸುವುದು, ಆನ್‌ಲೈನ್ ನಿಂದ ವಂಚಿಸುವುದು ಇತ್ಯಾದಿ.

ಎಟಿಎಂ ಮುಕ್ತಾಯದ ದಿನಾಂಕ, ನವೀಕರಣ, ಬ್ಯಾಂಕ್ ಸಿಬ್ಬಂದಿ ಹೆಸರಿನಲ್ಲಿ ಕರೆ, ಅಗ್ಗದ ದರದಲ್ಲಿ ಸಾಲ ಕೊಡುವುದು, ಆಧಾರ್ ಪ್ಯಾನ್‌ನೊಂದಿಗೆ ಲಿಂಕ್ ಮಾಡುವುದು ಇತ್ಯಾದಿ ಕರೆಗಳನ್ನು ಜನರು ಸ್ವೀಕರಿಸುವಾಗ ಜಾಗ್ರತೆ ವಹಿಸಬೇಕು. ಕರೆ ಮಾಡಿದವರಿಗೆ ಒಟಿಪಿ ನೀಡುವುದು, ಅಶ್ಲೀಲ ಸೈಟ್‌ಗಳಿಗೆ ಭೇಟಿ ಇತ್ಯಾದಿ. ನೆರವು ನೀಡುವ ಸೋಗಿನಲ್ಲಿ ಕಳ್ಳರು ಎಟಿಎಂ ಕಾರ್ಡ್‌ ಬದಲಾಯಿಸುತ್ತಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಈ ಬಗ್ಗೆ ಮಾಹಿತಿ ನೀಡಿ, "ಸಾರ್ವಜನಿಕರು ತಮ್ಮ ಎಟಿಎಂ ಪಾಸ್ ವರ್ಡ್ ಹಾಗೂ ಬ್ಯಾಂಕ್ ವಿವರ ಯಾರ ಜತೆಗೂ ಹಂಚಿಕೊಳ್ಳಬಾರದು. ಆನ್‌ಲೈನ್‌ನಲ್ಲಿ ವ್ಯವಹಾರ ಮಾಡುವಾಗ ತುಂಬಾ ಎಚ್ಚರಿಕೆಯಿಂದಿರಬೇಕು ಎಂದು ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

24/01/2021 11:11 pm

Cinque Terre

31.09 K

Cinque Terre

2

ಸಂಬಂಧಿತ ಸುದ್ದಿ