ಸುಳ್ಯ: ತಾಲೂಕಿನ ಕೇರ್ಪಳದಿಂದ ಕಾಣೆಯಾಗಿದ್ದ ಮಹಿಳೆಯೋರ್ವರ ಮೃತದೇಹ ನಾರ್ಕೋಡು ಸಮೀಪ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿದೆ.
ಸುಳ್ಯ ತಾಲೂಕಿನ ಕೇರ್ಪಳದಲ್ಲಿ ಬಾಡಿಗೆ ರೂಂನಲ್ಲಿರುವ ಆನಂದ ಎಂಬವರ ಪತ್ನಿ ಚಂದ್ರಾವತಿ ಅವರು ಕಾಣೆಯಾದ ದಿನದಿಂದ ಸಮೀಪದ ಕಾಡುಗುಡ್ಡಗಳಲ್ಲಿ ಕೂಡ ಹುಡುಕಾಟ ಮಾಡಲಾಗಿತ್ತು. ಆದರೆ ಅವರು ಎಲ್ಲಿಯೂ ಪತ್ತೆಯಾಗಿರಲಿಲ್ಲ ಮತ್ತು ಮನೆಗೂ ಹಿಂತಿರುಗಿರಲಿಲ್ಲ. ನಂತರದಲ್ಲಿ ಇವರ ಮೊಬೈಲ್ ಫೋನ್ ಮತ್ತು ಪರ್ಸ್ ನದಿಯ ಸಮೀಪದಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಮನೆಯವರು, ಸ್ಥಳೀಯರು, ಅಗ್ನಿಶಾಮಕ ದಳ ಮತ್ತು ಗೃಹರಕ್ಷಕ ದಳವು ಪಯಸ್ವಿನಿ ನದಿಯ ಗುಂಡಿಗಳಲ್ಲಿ ಹುಡುಕಾಟ ನಡೆಸಿದ್ದರು. ಆದರೂ ಇವರ ಸುಳಿವು ಸಿಕ್ಕಿರಲಿಲ್ಲ.
ಇದೀಗ ಜ.23 ರಂದು ನಾರ್ಕೋಡು ಸಮೀಪ ಪಯಸ್ವಿನಿ ನದಿಯ ನೀರಲ್ಲಿ ಚಂದ್ರಾವತಿಯವರ ಮೃತದೇಹ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಪಡೆದಿದ್ದಾರೆ.
Kshetra Samachara
24/01/2021 12:21 pm