ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಲವ್ ಜಿಹಾದ್: ಹೊಡೆದಾಟಕ್ಕೆ ಸಿದ್ದರಾಗಿ ಎಂದು ಕಾರ್ಯಕರ್ತರಿಗೆ ಪರೋಕ್ಷ ಕರೆ ನೀಡಿದ್ರ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್..?

ಮಂಗಳೂರು: ಮಂಗಳೂರಿನ ಉಳ್ಳಾಲದಲ್ಲಿ ಮಾಜಿ ಶಾಸಕ ಇದಿನಬ್ಬರ ಮಗನ ಮನೆ ಮೇಲೆ ಎನ್ ಐಎ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಯುವತಿಯನ್ನು ಆ ಮನೆಯಲ್ಲಿ ಮತಾಂತರ ಮಾಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಬಂಟ ಸಮುದಾಯದ ಹುಡುಗಿ ದೀಪ್ತಿ ಮಾರ್ಲ ದೇರಳಕಟ್ಟೆಯ ಖಾಸಗಿ ಕಾಲೇಜಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಶಿಕ್ಷಣ ಪಡೆಯುತ್ತಿದ್ದಳು.

ಇದಿನಬ್ಬರ ಮೊಮ್ಮಗ ಪ್ರೀತಿ, ಪ್ರೇಮದ ಹೆಸರಲ್ಲಿ ಆಕೆಯನ್ನು ಮೋಸಕ್ಕೆ ಸಿಲುಕಿಸಿ‌ ಮದುವೆಯಾಗಿ ಇಸ್ಲಾಂಗೆ ಮತಾಂತರ ಮಾಡಿ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ವರದಿಯಾಗಿದೆ. ಹೀಗಾಗಿ ನಾವು ಮುಸ್ಲಿಂ ಸಂಘಟನೆಗಳಿಗೆ, ಮುಸ್ಲಿಂ ಮುಖಂಡರಿಗೆ, ಜಮಾತ್ ನ ಪ್ರಮುಖರಿಗೆ ನೇರವಾಗಿ ಎಚ್ಚರಿಕೆ ಕೊಡುತ್ತಿದ್ದೇವೆ, ಈ ಘಟನೆ ಬಗ್ಗೆ ತಾವೂ ಯಾರು ಕೂಡಾ ಹೇಳಿಕೆ ಕೊಟ್ಟಿಲ್ಲ. ಆದ್ದರಿಂದ ನಿಮ್ಮ ಸಮುದಾಯದ ಮೇಲೆ ನಮಗೆ ಸಂಶಯ ಬರುತ್ತಿದೆ ಎಂದು ಕಿಡಿಕಾರಿದ್ರು. ನಿಮ್ಮ ಅನುಮಾನದ ನಡೆಯಿಂದ ಸಮಾಜದ್ರೋಹಿ, ಭಯೋತ್ಪಾದಕರಿಗೆ ಬೆಂಬಲ ನೀಡ್ತಿದ್ದೀರಾ ಎಂಬ ಪ್ರಶ್ನೆ ಮೂಡಿದೆ.

ಹೀಗಾಗಿ ನಿಮಗೆ ವಿಎಚ್ ಪಿ ನೇರವಾಗಿ ಎಚ್ಚರಿಕೆ ನೀಡ್ತಿದೆ. ಇವತ್ತು ಯಾರು ಲವ್ ಜಿಹಾದ್ ಕೃತ್ಯ ಮಾಡ್ತಿದ್ದೀರಿ, ಸಮಾಜದ್ರೋಹಿಗಳಿಗೆ ಸಹಕಾರ ಕೊಡ್ತ ಇದ್ದೀರಿ, ಕೂಡಲೇ ಇದನ್ನು ನಿಲ್ಲಿಸಬೇಕು. ನಿಮ್ಮ ಕೃತ್ಯದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ ಶರಣ್ ಪಂಪ್ ವೆಲ್, ಇದನ್ನು ಮತ್ತೆ ಮುಂದುವರಿಸಿದ್ರೆ ಅದು ಹೋರಾಟ ಆಗ್ಬಹುದು. ಇಲ್ಲದಿದ್ದಲ್ಲಿ ಹೊಡೆದಾಟ ಆಗಬಹುದು.

ಮುಂದೆ ಆಗುವ ಎಲ್ಲಾ ಘಟನೆಗಳಿಗೆ ತಾವೇ ಜವಾಬ್ದಾರಿ ಆಗ್ತೀರಾ ಎಂದು ಎಚ್ಚರಿಕೆ ನೀಡಿದರು. ನಾನು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಭಜರಂಗದಳದ ಕಾರ್ಯಕರ್ತರಿಗೆ ಕರೆ ನೀಡ್ತಿದ್ದೇನೆ.‌ ಕರಾವಳಿಯಲ್ಲಿ ಲವ್ ಜಿಹಾದ್ ಪ್ರಕರಣ ಪ್ರತಿ ದಿನ ಹೆಚ್ಚಾಗ್ತಿದೆ.

ನಮ್ಮ ಗ್ರಾಮ, ಊರಲ್ಲಿ ಈ ಘಟನೆ ನಡೆದಾಗ ಪೊಲೀಸ್ ಗಮನಕ್ಕೆ ತರ್ಬೇಕು. ಈ ಲವ್ ಜಿಹಾದ್ ಬಗ್ಗೆ ಯಾವುದೇ ರೀತಿಯ ಹೋರಾಟಕ್ಕೆ ಸಿದ್ದರಾಗಿ ಎಂಬ ಕರೆಯನ್ನು ಕೊಡ್ತೇವೆ ಎಂದರು...

Edited By : Shivu K
Kshetra Samachara

Kshetra Samachara

10/08/2021 04:28 pm

Cinque Terre

10.55 K

Cinque Terre

3

ಸಂಬಂಧಿತ ಸುದ್ದಿ