ಕುಂದಾಪುರ: ಬೈಕುಗಳೆರಡರ ಡಿಕ್ಕಿ ಸಂಭವಿಸಿದ ಪರಿಣಾಮ, ದಂಪತಿಗಳು ಪ್ರಯಾಣಿಸುತ್ತಿದ್ದ ಬೈಕ್ ನಲ್ಲಿ ಬೈಕ್ ಚಲಾಯಿಸುತ್ತಿದ್ದ ಪತಿ ಹಾಗೂ ಪತ್ನಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುತ್ತಿದ್ದಾಗಲೇ ಪತಿ ಸಾವನ್ನಪ್ಪಿದ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಯೆಡ್ತೆರೆ ಎಂಬಲ್ಲಿ ನಡೆದಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರನನ್ನು ಸ್ಥಳೀಯ ನಿವಾಸಿ ಜಗದೀಶ ಪಟ್ವಾಲ್ ಎಂದು ಗುರುತಿಸಲಾಗಿದ್ದು, ಅವರ ಪತ್ನಿ ಆಶಾ ಗಂಭೀರವಾಗಿ ಗಾಯಗೊಂಡವರು.
ಜಗದೀಶ್ ಪಟ್ವಾಲ್ ಅವರು ಬೈಕಿನಲ್ಲಿ ತನ್ನ ಪ್ತನಿ ಆಶಾ ಅವರನ್ನು ಕುಳ್ಳಿರಿಸಿಕೊಂಡು, ಬಿಜೂರು ಕಡೆಯಿಂದ ಬಂದು ಕೊಲ್ಲೂರು ರಸ್ತೆ ಕಡೆಗೆ ಹೋಗುವರೇ ಯಡ್ತರೆ ಜಂಕ್ಷನ್ ಬಳಿ ಮೋಟಾರು ಸೈಕಲ್ ನ ಬಲಬದಿಯ ಇಂಡಿಕೇಟರ್ ಹಾಕಿ ಬಲ ಬದಿಗೆ ತಿರುಗಿಸುತ್ತಿದ್ದ ಸಂದರ್ಭ ಮಹಮ್ಮದ್ ಇಬ್ರಾಹಿಂ ಎಂಬಾತ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಅಪಘಾತ ನಡೆದಿದೆ. ಬೈಕ್ ಸವಾರ ಜಗದೀಶ್ ಪಟ್ವಾಲ್ ಹಾಗೂ ಸಹ ಸವಾರಳು ರಸ್ತೆಗೆ ಬಿದ್ದಿದ್ದು ಜಗದೀಶ್ ಪಟ್ವಾಲ್ ರವರಿಗೆ ಹೊಟ್ಟೆಯ ಭಾಗ , ಸೊಂಟಕ್ಕೆ ಒಳ ನೋವು ಹಾಗೂ ರಕ್ತಗಾಯವಾಗಿತ್ತು. ಆಶಾ ರವರಿಗೆ ತಲೆ, ಬಲಕೈಗೆ ರಕ್ತ ಗಾಯವಾಗಿದ್ದು, ಗಾಯಾಳುಗಳನ್ನು ಗುರುಕಿರಣ ಹಾಗೂ ಶ್ರೀಧರ್ ರವರು ಚಿಕಿತ್ಸೆ ಬಗ್ಗೆ ಮಣಿಪಾಲಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ ಜಗದೀಶ್ ದಾರಿಮಧ್ಯೆ ಮೃತಪಟ್ಟಿದ್ದಾರೆ. ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
21/09/2022 04:54 pm