ಪುತ್ತೂರು: ಅರಣ್ಯ ಇಲಾಖೆಯ ವಿಶೇಷ ತಂಡ ಕುಖ್ಯಾತ ಅಂತರ್ ರಾಜ್ಯ ದಂತಚೋರರನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಮಾಣಿ-ಮೈಸೂರು ಬೈಪಾಸ್ ರಸ್ತೆಯ ರಾಷ್ಟ್ರೀಯ ಹೆದ್ದಾರಿಯ ಮಹಾವೀರ ಆಸ್ಪತ್ರೆಗೆ ತಿರುಗುವ ಜಂಕ್ಷನ್‌ನಲ್ಲಿ ಆರೋಪಿಗಳನ್ನು ಅಡ್ಡಗಟ್ಟಿ ದಂತ ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಶಶಿಕುಮಾರ್, ಸತೀಶ್ ,ವಿಜ್ಞೇಶ್, ವಿನಿತ್, ಸಂಪತ್‌ಕುಮಾರ, ರತೀಶ ಎಂದು ಗುರುತಿಸಲಾಗಿದೆ.
ಆರೋಪಿಗಳು ತಮಿಳುನಾಡು ಮತ್ತು ಕೇರಳ ಮೂಲದವರಾಗಿದ್ದು, 6 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಸದರಿ ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಾದ ವೈ ಕೆ ದಿನೇಶ್ ಕುಮಾರ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಿ ಪಿ ಕಾರ್ಯಪ್ಪ ನಿರ್ದೇಶನದಂತೆ ವಲಯ ಅರಣ್ಯಾಧಿಕಾರಿಗಳಾದ ಕಿರಣ್ ಉಪ ವಲಯ ಅರಣ್ಯಾಧಿಕಾರಿಗಳಾದ ಲೋಕೇಶ್ ಎಸ್ ಎನ್, ಶಿವಾನಂದ್ ಆಚಾರ್ಯ, ಪ್ರಕಾಶ್ ಬಿ.ಟಿ, ಕುಮಾರಸ್ವಾಮಿ, ಮೆಹಬೂಬ್, ಪ್ರಸಾದ್, ಅರಣ್ಯ ರಕ್ಷಕರುಗಳಾದ ನಿಂಗರಾಜ್, ಸುಧೀರ್, ಸತ್ಯನ್, ದೀಪಕ, ಉಮೇಶ, ಇಲಾಖೆ ವಾಹನ ಚಾಲಕರಾದ ಜಗದೀಶ್, ರೋಹಿತ್ ಪಾಲ್ಗೊಂಡಿದ್ದರು.
Kshetra Samachara
19/06/2022 03:33 pm