ಮಂಗಳೂರು: ಕಾರು ಶೋರೂಂ ಆವರಣದೊಳಗೆ ಹಾಡಹಗಲೇ ಕಾಡುಹಂದಿಯೊಂದು ನುಗ್ಗಿ ಒಬ್ಬನಿಗೆ ತಿವಿಯಲು ಯತ್ನಿಸಿ ಆತಂಕ ಸೃಷ್ಟಿಸಿದ ಘಟನೆ ಮಂಗಳೂರು ನಗರದ ಪಡೀಲ್ ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ.
ಈ ಘಟನೆ ಬುಧವಾರ ನಡೆದಿದ್ದು, ಸಿಸಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯ ಸದ್ಯ ವೈರಲ್ ಆಗುತ್ತಿದೆ. ಬುಧವಾರ ಮಧ್ಯಾಹ್ನ ಒಂದು ಗಂಟೆ ವೇಳೆಗೆ ಶೋರೂಂ ಆವರಣದೊಳಗೆ ನುಗ್ಗಿದ ಕಾಡುಹಂದಿ, ಎರಡೆರಡು ಬಾರಿ ಓಡಾಡಿದೆ. ಇದನ್ನು ಕಂಡು ಅಲ್ಲಿದ್ದವರು ದಿಕ್ಕಾಪಾಲಾಗಿ ಓಡಿದ್ದಾರೆ.
ಒಬ್ಬರನ್ನು ಹಂದಿ ಬೆನ್ನಟ್ಟಿದ್ದು, ಅವರು ಪವಾಡ ಸದೃಶ ರೀತಿಯಲ್ಲಿ ತಪ್ಪಿಸಿಕೊಂಡಿದ್ದಾರೆ. ಕಾಡುಹಂದಿ ಹೆದ್ದಾರಿ ದಾಟಿ, ಮುಖ್ಯದ್ವಾರದಲ್ಲೇ ಆವರಣ ಪ್ರವೇಶಿಸಿತ್ತು.
Kshetra Samachara
27/11/2021 01:51 pm