ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಏಕಾಏಕಿ ಹೆದ್ದಾರಿ ತಡೆ!; ಪ್ರಾಣ ಭಯ ತಂದೊಡ್ಡಿದ ಮದ್ಯ ವ್ಯಸನಿಯ ನಡೆ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಬಾರ್ ನಲ್ಲಿ ಮದ್ಯ ಸೇವಿಸಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನಗಳನ್ನು ತಡೆದು ಸಾರ್ವಜನಿಕರನ್ನು ಭಯಭೀತರನ್ನಾಗಿಸಿದ್ದಾನೆ!

ಮುಲ್ಕಿ ಬಸ್ ನಿಲ್ದಾಣದ ಬಳಿ ಸಂಜೆ ವೇಳೆ ಅಂಗರಗುಡ್ಡೆ ಮೂಲದ ಶಿವಪ್ರಸಾದ್ ಶೆಟ್ಟಿ ಎಂಬಾತ ಸ್ಥಳೀಯ ಬಾರ್ ನಲ್ಲಿ ನಶೆ ಏರಿಸಿಕೊಂಡು ಜನರು ನೋಡ ನೋಡುತ್ತಿದ್ದಂತೆಯೇ ಹೆದ್ದಾರಿಯಲ್ಲಿ ಅತೀ ವೇಗದಲ್ಲಿ ಸಾಗುತ್ತಿದ್ದ ವಾಹನಗಳನ್ನು ಏಕಾಏಕಿ ತಡೆದು ನಿಲ್ಲಿಸಿ, ಆತಂಕ ತಂದೊಡ್ಡಿದ್ದ.

ಈತನ ಅವಿವೇಕತನದಿಂದಾಗಿ ಸ್ಥಳದಲ್ಲಿ ಗೊಂದಲದ ಸ್ಥಿತಿ ಉಂಟಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.

ಕೂಡಲೇ ಮುಲ್ಕಿ ಪೊಲೀಸರು ಹಾಗೂ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿ ಶಿವಪ್ರಸಾದ್ ಶೆಟ್ಟಿಯನ್ನು ವಶಕ್ಕೆ ಪಡೆದು, ಆತನ ಮನೆಯವರಿಗೆ ಮಾಹಿತಿ ನೀಡಿದರು.

Edited By :
PublicNext

PublicNext

13/10/2022 09:21 pm

Cinque Terre

69.91 K

Cinque Terre

5

ಸಂಬಂಧಿತ ಸುದ್ದಿ