ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಸೇತುವೆ ಬಳಿ ಬೈಕ್ ನಿಲ್ಲಿಸಿ ಯುವಕ ನದಿಗೆ ಹಾರಿರುವ ಶಂಕೆ

ಮಲ್ಪೆ: ಇತ್ತೀಚೆಗೆ ಪದೆಪದೆ ಸೇತುವೆ ಬಳಿ ಬೈಕ್ ಇಟ್ಟು ನದಿಗೆ ಹಾರುವ ಪ್ರವೃತ್ತಿ ಹೆಚ್ಚುತ್ತಿದ್ದು ಇಂತಹದ್ದೇ ಒಂದು ಘಟನೆ ಇಂದು ನಡೆದಿದೆ.

ಮಲ್ಪೆ ಪಡುಕೆರೆ ಸಮೀಪ ಸೇತುವೆ ಮೇಲೆ ಯುವಕನೊಬ್ಬ ಬೈಕ್ ನಿಲ್ಲಿಸಿ ಪಾಪನಾಸಿನಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.ದಾವಣಗೆರೆ ಮೂಲದ ಶಿವ ನಾಪತ್ತೆಯಾದ ಯುವಕ. ಉಡುಪಿಯಲ್ಲಿ ಕೆಲಸ ಮಾಡಿಕೊಂಡಿದ್ದ ದಾವಣಗೆರೆಯ ಶಿವ,ಉಡುಪಿ ಜಿಲ್ಲೆಯ ಪಡುಕರೆ ಸಮೀಪದ ಪಾಪನಾಸಿನಿ

ನದಿಯ ಸೇತುವೆಯಲ್ಲಿ ಬೈಕ್ ನಿಲ್ಲಿಸಿ ನದಿಗೆ ಹಾರಿದ್ದಾರೆ ಎನ್ನಲಾಗಿದೆ. ಇದೀಗ ನಾಪತ್ತೆಯಾದ ಯುವಕನಿಗಾಗಿ ಸ್ಥಳೀಯ ಮುಳುಗು ತಜ್ಞರು ತೀವ್ರ ಶೋಧದಲ್ಲಿ ತೊಡಗಿದ್ದಾರೆ. ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

24/09/2022 02:48 pm

Cinque Terre

10.9 K

Cinque Terre

0

ಸಂಬಂಧಿತ ಸುದ್ದಿ