ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಚಾಲಕನಿಗೆ ನಿದ್ದೆ ಬರುವ ಸ್ಪ್ರೇ ಎರಚಿ ಲಾರಿಯ ಐದು ಟಯರ್ ಕಳವು: ಶಿರೂರಿನಲ್ಲಿ ಖತರ್ ನಾಕ್ ಕಳ್ಳರ ಗ್ಯಾಂಗ್!

ಬೈಂದೂರು: ತಾಲೂಕಿನ ಶಿರೂರು ಟೋಲ್ ಪ್ಲಾಜಾ ಬಳಿ ದರೋಡೆ ಗ್ಯಾಂಗ್ ಕೈಚಳಕ ತೋರಿದ್ದು ಲಾರಿ ನಿಲ್ಲಿಸಿ ಚಾಲಕ ಮಲಗಿದ್ದಾಗಲೇ ಲಾರಿಯ ಐದು ಟಯರ್ ಗಳನ್ನು ಎಗರಿಸಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಸಮೀಪ ಈ ಘಟನೆ ಸಂಭವಿಸಿದ್ದು ಬೈಂದೂರು ಪೊಲೀಸರಿಗೆ ದೂರು ನೀಡಲಾಗಿದೆ.

ಹೇಗಾಯ್ತು ಘಟನೆ?

ಉತ್ತರ ಕನ್ನಡದಿಂದ ಬಂದಿದ್ದ ಚಾಲಕ ರಾತ್ರಿ ವೇಳೆ ಲಾರಿ ನಿಲ್ಲಿಸಿ ನಿದ್ರೆಗೆ ಜಾರಿದ್ದರು. ಚಾಲಕನಿಗೆ ಗೊತ್ತಾಗದಂತೆ ಬಂದ ದರೋಡೆಕೋರರ ತಂಡ ಲಾರಿಯಲ್ಲಿ ಮಲಗಿದ್ದ ಚಾಲಕನಿಗೆ ಸ್ಪ್ರೇ ಹೊಡೆದು ಕ್ಷಣಮಾತ್ರದಲ್ಲೇ ರಿಮ್ ಡಿಸ್ಕ್ ಸಹಿತ ಐದು ಟಯರ್ ಕಳವು ಮಾಡಿದೆ. ಮರದ ತುಂಡನ್ನು ಜ್ಯಾಕ್ ನಂತೆ ಇಟ್ಟು ಟಯರ್ ಕಳವು ಮಾಡಲಾಗಿದೆ.ಸ್ಪ್ರೇ ಎರಚಿದ್ದರಿಂದ ಚಾಲಕನಿಗೆ ಎಚ್ಚರವಾಗಿರಲಿಲ್ಲ.

ಬೆಳಿಗ್ಗೆ ಲಾರಿ ಸ್ಟಾರ್ಟ್ ಮಾಡಿ ಮೂವ್ ಮಾಡುವಾಗ ಲಾರಿ ಒಂದು ಕಡೆ ವಾಲತೊಡಗಿದೆ. ಇದರಿಂದ ಅನುಮಾನಗೊಂಡ ಚಾಲಕ ಇಳಿದು ನೋಡಿದಾಗ ನಾಲ್ಕು ಟಯರ್ ಮತ್ತು ಒಂದು ಸ್ಟೆಪಿನ್ ಹೀಗೆ ಐದು ಟಯರ್ ಕಳವಾಗಿರುವುದು ಗೊತ್ತಾಗಿದೆ. ಇದೀಗ ಬೈಂದೂರು ಪೊಲೀಸರು ಸಿಟಿಟಿವಿ ದೃಶ್ಯ ಕಲೆಹಾಕಿ ತನಿಖೆ ‌ಶುರು ಮಾಡಿದ್ದಾರೆ. ಅಂದಾಜು ಎರಡು ಲಕ್ಷ ರೂ.ಗಳ ಟಯರ್ ಕಳುವಾದ ಬಗ್ಗೆ ಲಾರಿ ಚಾಲಕ ಕಂ ಮಾಲೀಕ ತೀವ್ರ ಬೇಸರಗೊಂಡಿದ್ದಾರೆ.

Edited By :
PublicNext

PublicNext

17/09/2022 12:01 pm

Cinque Terre

25.95 K

Cinque Terre

1

ಸಂಬಂಧಿತ ಸುದ್ದಿ