ಕುಂದಾಪುರ: ಕಳೆದ ವರ್ಷ ಜೂನ್ 5ರ ಶನಿವಾರ ರಾತ್ರಿ ಕುಂದಾಪುರ ತಾಲೂಕಿನ ಯಡಮೊಗ್ಗೆ ಎಂಬಲ್ಲಿ ಬಿಜೆಪಿ ಕಾರ್ಯಕರ್ತ ಉದಯ ಗಾಣಿಗ ಎಂಬುವರ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿದ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಆರ್‌ಎಸ್‌ಎಸ್ ಮುಖಂಡ ಬಾಲಚಂದ್ರ ಭಟ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ನೀಡಿದ್ದು ಮಂಗಳವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಬಾಲಚಂದ್ರ ಭಟ್ ಘಟನೆ ನಡೆದು ನಾಲ್ಕು ದಿನಗಳ ಬಳಿಕ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. ಉಚ್ಚ ನ್ಯಾಯಾಲಯದಲ್ಲಿಯೂ ಅವರಿಗೆ ಜಾಮೀನು ದೊರಕಿರಲಿಲ್ಲ. ಇದೀಗ ಪೊಲೀಸರು ಚಾರ್ಜ್‌ಶೀಟ್ ಹಾಕಿದ್ದು, ಹದಿನಾಲ್ಕು ತಿಂಗಳ ಬಳಿಕ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ಪ್ರಕರಣದ ಪ್ರಮುಖ ಆರೋಪಿ ಪ್ರಾಣೇಶ್ ಯಡಿಯಾಳ್, ಇತರ ಆರೋಪಿಗಳಾದ ಮನೋಜ್ ಕುಮಾರ್, ಸದಾಶಿವ ನಾಯ್ಕ್, ವೇಣುಗೋಪಾಲ ಶೆಟ್ಟಿ ಮೊದಲಾದವರಿಗೆ ಇನ್ನೂ ಜಾಮೀನು ದೊರಕಿಲ್ಲ.
PublicNext
30/08/2022 03:57 pm