ಉಡುಪಿ; ಡಗ್ಸ್ ದಂಧೆ ,ಗೋಕಳ್ಳತನ ಮಾಡುವವರ ಪೆರೇಡ್ ಮಾಡಿ ವಾರ್ನಿಂಗ್ ಮಾಡುವ ಕೆಲಸ ಕಳೆದ ವಾರದಿಂದ ಜಿಲ್ಲಾದ್ಯಂತ ಮಾಡುತ್ತಿದ್ದೇವೆ ಎಂದು ಉಡುಪಿ ಎಸ್ಪಿ ವಿಷ್ಣುವರ್ದನ ಹೇಳಿದ್ದಾರೆ.
ಮಣಿಪಾಲದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ,ನಿನ್ನೆ ಕಾರ್ಕಳ ತಾಲೂಕಿನಲ್ಲಿ ಗೋಕಳ್ಳರು ನಮ್ಮ ತಪಾಸಣಾ ನಿರತ ಪೊಲೀಸರ ಮೇಲೆಯೇ ವಾಹನ ಹತ್ತಿಸಲು ಬಂದು ತಪ್ಪಿಸಿಕೊಂಡಿದ್ದಾರೆ.ಈ ವೇಳೆ ಬೈಕ್ ಸವಾರನನ್ನು ಬಂಧಿಸಲಾಗಿದೆ.ಉಳಿದ ಆರೋಪಿಗಳ ಸುಳಿವು ಸಿಕ್ಕಿದ್ದು ಶೀಘ್ರ ಬಂಧಿಸುತ್ತೇವೆ ಎಂದು ಹೇಳಿದ್ದಾರೆ.
ಇದಲ್ಲದೆ ಅಕ್ರಮ ಮಟ್ಕಾ ,ಜಿಗಾರಿ ಅಡ್ಡೆಗಳ ಮೇಲೂ ದಾಳಿ ನಡೆಸುತ್ತಿದ್ದೇವೆ.ಡ್ರಗ್ಸ್ ,ಗೋಸಾಗಾಟ,ಮಟ್ಕಾ ಮತ್ತು ಅಕ್ರಮ ಜಿಗಾರಿ ಅಡ್ಡೆಗಳ ವಿರುದ್ಧ ಕಾರ್ಯಾಚರಣೆ ಇನ್ಬಷ್ಟು ಬಿಗಿಗೊಳಿಸುತ್ತೇವೆ ಎಂದು ಹೇಳಿದರು.
Kshetra Samachara
31/01/2022 06:29 pm