ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು :ಕಾಮುಕ ಆರೋಪಿ ರಾಜೇಶ್ ಭಟ್ ಜಾಮೀನು ನಿರಾಕರಣೆ, 4 ದಿನ ಪೊಲೀಸ್ ವಶಕ್ಕೆ

ಮಂಗಳೂರು: ಇಂಟರ್ನ್ ಶಿಪ್​ ಕಾನೂನು ವಿದ್ಯಾರ್ಥಿನಿಗೆ ಕಚೇರಿಯಲ್ಲಿಯೇ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ನ್ಯಾಯವಾದಿ ಕೆಎಸ್ಎನ್ ರಾಜೇಶ್​​ಭಟ್ ಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದ್ದು, ಅಲ್ಲದೆ ಆರೋಪಿಯನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಕೆಎಸ್ಎನ್ ರಾಜೇಶ್ ಭಟ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ ಈ ಆದೇಶವನ್ನು ಮಾಡಿದೆ. ಆರೋಪಿ ವೃತ್ತಿಪರ ವಕೀಲನಾಗಿದ್ದು, ಪೊಲೀಸರು, ವಿಶ್ವವಿದ್ಯಾಲಯ ಹಾಗೂ ನ್ಯಾಯಾಧೀಶರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿರುವ ವಕೀಲರು, ದೂರಿನಲ್ಲಿರುವ ಅಂಶಗಳ ಮೇರೆಗೆ ಐಪಿಸಿ ಸೆಕ್ಷನ್ 376ರಡಿ ಇದನ್ನು ಅತ್ಯಾಚಾರ ಪ್ರಕರಣವೆಂದು ದಾಖಲಿಸಲಾಗುವುದಿಲ್ಲ. ಹಾಗೆಯೇ, ಐಪಿಸಿ ಸೆಕ್ಷನ್ 354ಎ ಅಡಿಯಲ್ಲಿ ಲೈಂಗಿಕ ಕಿರುಕುಳ ನೀಡಿರುವ ಆರೋಪಕ್ಕೆ ಮರಣದಂಡನೆ ಶಿಕ್ಷೆ ವಿಧಿಸಲಾಗದು. ‘ಐಪಿಸಿ 354 ಆರೋಪಕ್ಕೆ 3 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದು. ದೂರು ನೀಡುವಲ್ಲಿಯೂ ವಿಳಂಬವಾಗಿದೆ. ಸಂತ್ರಸ್ತೆ ಸಿಸಿಟಿವಿ ದೃಶ್ಯಾವಳಿ ನಾಶಪಡಿಸಲಾಗಿದೆ ಎಂದಿದ್ದು, ಅದನ್ನು ಈಗಲೂ ಪಡೆದುಕೊಳ್ಳಲು ಸಾಧ್ಯ. ಪೊಲೀಸರ ಮುಂದೆ ಹಾಜರಾದ ವೇಳೆ ಅರ್ಜಿದಾರರನ್ನು ವೈದ್ಯಕೀಯ ಪರೀಕ್ಷೆಗೂ ಒಳಪಡಿಸಲಾಗಿದೆ.

ಹೀಗಾಗಿ, ಅರ್ಜಿದಾರರನ್ನು ಪೊಲೀಸ್ ವಶಕ್ಕೆ ಪಡೆದು ತನಿಖೆ ನಡೆಸುವ ಅಗತ್ಯವಿಲ್ಲ. ಆದ್ದರಿಂದ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿದ್ದರು. ಆದರೆ ಇದಕ್ಕೆ ಆಕ್ಷೇಪಿಸಿರುವ ಪ್ರಾಸಿಕ್ಯೂಷನ್ ಪರ ವಕೀಲರು, ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸುವ ನಿಟ್ಟಿನಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಳ್ಳುವ ಅಗತ್ಯವಿದೆ. ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಕೆಲವೊಂದು ವೀಡಿಯೋ ಕ್ಲಿಪ್​ಗಳನ್ನು ಪಡೆದುಕೊಳ್ಳಲು ಮೊಬೈಲ್ ಕೂಡ ಜಪ್ತಿ ಮಾಡಬೇಕು. ಜತೆಗೆ ಆರೋಪಿ ಪ್ರಭಾವಿಯಾಗಿರುವುದರಿಂದ ಪೊಲೀಸರಿಗೆ, ನ್ಯಾಯಾಧೀಶರಿಗೆ ಲಂಚ ನೀಡುವ ಸಾಧ್ಯತೆ ಇದೆ ಎಂದು ವಾದ ಮಂಡಿಸಿದ್ದಾರೆ ಎನ್ನಲಾಗಿದೆ.

ವಾದ ಪ್ರತಿವಾದವನ್ನು ಆಲಿಸಿರುವ ನ್ಯಾಯಪೀಠ, ಅರ್ಜಿದಾರನ ವಿರುದ್ಧ ಅತ್ಯಾಚಾರಕ್ಕೆ ಯತ್ನಿಸಿದ ಆರೋಪವಿದೆ. ಆರೋಪಿ ತನ್ನ ಹುದ್ದೆ ದುರ್ಬಳಕೆ ಮಾಡಿಕೊಂಡು ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದು ತಿಳಿದುಬಂದಿದೆ. ಮುಂಚಿತವಾಗಿಯೇ ಆಕೆ ಎಚ್ಚೆತ್ತುಕೊಂಡಿದ್ದರಿಂದ ಸಂತ್ರಸ್ತೆ ಮೇಲೆ ಅತ್ಯಾಚಾರ ನಡೆಯುವುದು ತಪ್ಪಿದೆ. ಆದ್ದರಿಂದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅತ್ಯವಿದೆ‌‌. ಅಲ್ಲದೆ ಆತನಿಂದ ಸಿಸಿಟಿವಿ, ಮೊಬೈಲ್, ಸಂಭಾಷಣೆ ಮತ್ತಿತರ ಸಾಕ್ಷ್ಯಗಳನ್ನು ಜಪ್ತಿ ಮಾಡುವ ಅಗತ್ಯವಿದೆ. ಹೀಗಾಗಿ, ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವ ಆರೋಪಗಳಿಲ್ಲ ಎಂಬ ಕಾರಣಕ್ಕೆ ಗಂಭೀರ ಸ್ವರೂಪದ ಪ್ರಕರಣಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿದೆ. ಅಲ್ಲದೆ ಆರೋಪಿ ಕೆಎಸ್ಎನ್ ರಾಜೇಶ್​ ಭಟ್ ಗೆ ನ್ಯಾಯಾಲಯ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

Edited By : Nirmala Aralikatti
Kshetra Samachara

Kshetra Samachara

21/12/2021 08:40 pm

Cinque Terre

11.5 K

Cinque Terre

6

ಸಂಬಂಧಿತ ಸುದ್ದಿ