ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಹಿಳೆ ಬ್ಯಾಗ್ ಎಗರಿಸಲು ವಿಫಲ ಯತ್ನ : ಇದು ಅಣಕು ಪ್ರದರ್ಶನ, ಪೊಲೀಸ್ ಆಯುಕ್ತ ಎನ್.ಶಶಿಕುಮಾರ್

ಮಂಗಳೂರು: ಮಂಗಳೂರಲ್ಲಿ ಮಹಿಳೆಯ ಬ್ಯಾಗ್ ದರೋಡೆಗೆ ಯತ್ನ ಪ್ರಕರಣ ನಿಜವಾದ ಘಟನೆ ಅಲ್ಲ‌. ಪೊಲೀಸ್ ಇಲಾಖೆಯಿಂದ ಮಾಡಲಾದ ಅಣಕು ಕಾರ್ಯಾಚರಣೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿಕೆ‌ ನೀಡಿದ್ದಾರೆ. ಇಂತಹ ಘಟನೆ ಆದಾಗ ಸಾರ್ವಜನಿಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಹಾಗೂ ಪೊಲೀಸರು ಎಷ್ಟು ಬೇಗ ರೆಸ್ಪಾಂಡ್ ಮಾಡುತ್ತಾರೆ

ಎಂಬುದನ್ನು ತಿಳಿದುಕೊಳ್ಳಲು ಮಾಡಲಾದ ಅಣಕು ಕಾರ್ಯಾಚರಣೆ ಇದು ಎಂದರು.

ಮಂಗಳೂರಲ್ಲಿ ಇತ್ತೀಚೆಗೆ ಇಂತಹ ಪ್ರಕರಣಗಳು ನಡೆಯುತ್ತಿವೆ‌. ಇದರ ಬಗ್ಗೆ ಜನರಿಗೆ ಅರಿವು ಬರಬೇಕು. ವಿಕ್ಟಿಮ್ ಗಳು ಧೈರ್ಯವಾಗಿ ಎದುರಿಸಬೇಕು. ಪೊಲೀಸರು ಕೂಡ ತಕ್ಷಣ ಪ್ರತಿಕ್ರಿಯಿಸಬೇಕು. ಸ್ಥಳೀಯ ಪೊಲೀಸರಿಗೂ ತಿಳಿಸದೆ ಕಮೀಷನರ್ ರಿಂದ ಅಣುಕು ಕಾರ್ಯಾಚರಣೆ ನಡೆಸಲಾಗಿದೆ ಅಂದರು.

ಮಂಗಳೂರು ನಗರ ಪೊಲೀಸ್ ಮತ್ತು ಸ್ವರಕ್ಷಾ ಫಾರ್ ವುಮೆನ್ ಟ್ರಸ್ಟ್ ರಿಜಿಸ್ಟರ್ ಮಂಗಳೂರು ರವರ ಸಹಯೋಗದಲ್ಲಿ ಮಂಗಳೂರು ನಗರದ ಸೇಂಟ್ ಆಗ್ನೆಸ್ ಕಾಲೇಜು ಮುಂಭಾಗದಲ್ಲಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಕಾರಲ್ಲಿ ಬಂದ ತಂಡದ ದುಷ್ಕರ್ಮಿಯೊಬ್ಬ ಮಹಿಳೆಯ ಬ್ಯಾಗ್ ನ್ನು ಕಸಿದುಕೊಳ್ಳಲು ಪ್ರಯತ್ನಿಸಿದಾಗ ಮಹಿಳೆಯು ಆತನ ಮೇಲೆ ತಿರುಗಿ ಹಲ್ಲೆ ಮಾಡಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕುರಿತು ಅಣುಕು ಕಾರ್ಯಾಚರಣೆಯನ್ನು ನಡೆಸಲಾಯಿತು. ಶೋಭಲತಾ ಕಟೀಲ್ ರ ಮಾಲಕತ್ವದ ಸ್ವರಕ್ಷಾ ಫಾರ್ ವುಮೆನ್ ಟ್ರಸ್ಟ್ ರಿಜಿಸ್ಟರ್ ಮಂಗಳೂರು ರವರ ಸಹಯೋಗದೊಂದಿಗೆ ನಡೆಸಿರುವ ಅಣುಕು ಕಾರ್ಯಚರಣೆ ಯಶಸ್ವಿಯಾಗಿದೆ.

Edited By : Nagesh Gaonkar
Kshetra Samachara

Kshetra Samachara

12/09/2021 05:03 pm

Cinque Terre

20.86 K

Cinque Terre

1

ಸಂಬಂಧಿತ ಸುದ್ದಿ