ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಬೀಚ್‌ಗಳಿಗೆ ಗುರುವಾರ ಏಕಕಾಲಕ್ಕೆ ದಿಢೀರ್ ದಾಳಿ ನಡೆಸಿದ ಮಂಗಳೂರು ನಗರ ಪೊಲೀಸರು, ಅಕ್ರಮ ಚಟುವಟಿಕೆಗಳ ಬಗ್ಗೆ ಕೂಲಂಕಷ ತಪಾಸಣೆ, ವಿಚಾರಣೆ ನಡೆಸಿದರು.
ತಣ್ಣೀರುಬಾವಿ, ಪಣಂಬೂರು, ಸೋಮೇಶ್ವರ, ಸುರತ್ಕಲ್ ಬೀಚ್‌ಗಳಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿ ಕುಮಾರ್ ನೇತೃತ್ವದ ನಗರ ಪೊಲೀಸರ ತಂಡ ಏಕಕಾಲಕ್ಕೆ ಲಗ್ಗೆಯಿಟ್ಟು ಪರಿಶೀಲನೆ ನಡೆಸಿತು.
ಬೀಚ್‌ನಲ್ಲಿ ಅನಾಮಿಕರ ಸುತ್ತಾಟ, ಗಾಂಜಾ ಮತ್ತು ಡ್ರಗ್ಸ್ ಸೇರಿದಂತೆ ನಿಷೇಧಿತ ವಸ್ತುಗಳ ಸೇವನೆ, ಮದ್ಯ ಸೇವಿಸುವವರು ಸೇರಿದಂತೆ ನಾನಾ ರೀತಿಯಲ್ಲಿ ಪೊಲೀಸರು ತಪಾಸಣೆ ನಡೆಸಿದರು. ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.
Kshetra Samachara
08/01/2021 10:16 am