ಮಂಗಳೂರು: ನಕಲಿ ಪಾಸ್ ಪೋರ್ಟ್ ಬಳಸಿ ವಿದೇಶಕ್ಕೆ ತೆರಳಲು ಯತ್ನಿಸಿದ ಆರೋಪಿಗೆ 1 ವರ್ಷ ಸಾದಾ ಸಜೆ ವಿಧಿಸಿ ಒಂದನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯ ಆದೇಶಿಸಿದೆ.
ಬಂಟ್ವಾಳ ತಾಲೂಕಿನ ಸರಪ್ಪಾಡಿ ಗ್ರಾಮದ ನಿವಾಸಿ ಬದ್ರುದ್ದೀನ್ ಶಿಕ್ಷೆಗೊಳಗಾದ ಅಪರಾಧಿ.
ಎಸ್.ಮೊಹಮ್ಮದ್ 2010ರ ಸಂಜೆ 7.37ಕ್ಕೆ ಆರೋಪಿ ಬದ್ರುದ್ದೀನ್ ಎಂಬಾತ ಹಸೈನಾರ್ ಎಂಬಾತನ ಪಾಸ್ ಪೋರ್ಟ್ ಅನ್ನು ಬಳಸಿ ದುಬೈಗೆ ತೆರಳಲು ಯತ್ನಿಸಿದ್ದಾನೆ. ಇಮಿಗ್ರೇಷನ್ ಅಧಿಕಾರಿಗಳು ಪತ್ತೆಹಚ್ಚಿ ದೂರು ದಾಖಲಿಸಿದ್ದರು. ಈ ವೇಳೆ ಆತ ಪಾಸ್ ಪೋರ್ಟ್ ಅನ್ನು ಅಬ್ಬಾಸ್ ಎಂಬಾತ ನೀಡಿದ್ದು, ಇದಕ್ಕೆ ರಫೀಕ್ ಎಂಬಾತ ಸಹಕರಿಸಿದ್ದ ಎಂದು ಒಪ್ಪಿದ್ದನು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬಜ್ಪೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಈತ ಮಾಡಿರುವ ಕೃತ್ಯ 1ನೇ ಹೆಚ್ಚುವರಿ ಸಿಜೆಎಂಸಿ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಶಿಲ್ಪಾ ಆರೋಪಿ ಬದ್ರುದ್ದೀನ್ ಗೆ ಒಂದು ವರ್ಷದ ಸಾದಾ ಸಜೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಎರಡನೇ ಆರೋಪಿ ಅಬ್ಬಾಸ್ ಮೇಲಿದ್ದ ಆರೋಪ ಸಾಬೀತು ಆಗದ ಹಿನ್ನೆಲೆಯಲ್ಲಿ ಆತ ಖುಲಾಸೆಗೊಂಡಿದ್ದಾನೆ.
PublicNext
30/09/2022 06:57 pm