ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದೂವರೆ ಗಂಟೆಯೊಳಗೆ ಕಳ್ಳನನ್ನು ಬಂಧಿಸಿದ ಬಂದರ್ ಠಾಣೆ ಪೊಲೀಸರು: ಆಯುಕ್ತರಿಂದ ಅಭಿನಂದನೆ

ಮಂಗಳೂರು: ಒಂದೂವರೆ ಗಂಟೆಯ ಒಳಗೆ ಕದ್ದ ಮೊಬೈಲ್ ಗಳ ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಬಂದರ್ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಕಸಬ ಬೆಂಗ್ರೆ ನಿವಾಸಿ ಮೊಹಮ್ಮದ್ ಸುಹೈಲ್ (19), ಮೊಹಮ್ಮದ್ ಸರ್ಫರಾಜ್ (18), ಮೊಹಮ್ಮದ್ ಸಫ್ವಾನ್ (19) ಎಂದು ಗುರುತಿಸಲಾಗಿದೆ.

ಶನಿವಾರ ಕರಂಗಲ್ಪಾಡಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ಮಲಗಿದ್ದ ವೇಳೆ ಮೊಬೈಲ್ ಗಳು ಕಳವಾಗಿರುವುದಾಗಿ ಕಾರ್ಮಿಕರು ಬಂದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣ ದಾಖಲಾದ ಒಂದೂವರೆ ಗಂಟೆಯೊಳಗೆ ಕಳ್ಳರನ್ನು ಬಂಧಿಸಿದ್ದು, ಅವರ ಬಳಿ ಇದ್ದ 11 ಮೊಬೈಲ್ ಫೋನ್ ಗಳು ಹಾಗೂ ಎರಡು ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಶೀಘ್ರ ತನಿಖೆ ನಡೆಸಿದ ಮಂಗಳೂರು ಉತ್ತರ ಠಾಣೆಯ ಇನ್ಪೆಕ್ಟರ್ ಗೋವಿಂದರಾಜು ಬಿ., ಸಬ್ ಇನ್ಸ್ಪೆಕ್ಟರ್ ಗಳಾದ ಗುರುಕಾಂತಿ, ನಾಗರಾಜ್, ಸಿಬ್ಬಂದಿಗಳಾದ ಭರತ್, ವೆಲೆಂಟೈನ್ ಡಿಸೋಜ, ತಿಪ್ಪರಡ್ಡೆಪ್ಪ ಅವರನ್ನು ಒಳಗೊಂಡ ತಂಡವನ್ನು ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

Edited By :
Kshetra Samachara

Kshetra Samachara

27/09/2020 07:25 am

Cinque Terre

52.71 K

Cinque Terre

0

ಸಂಬಂಧಿತ ಸುದ್ದಿ