ಉಡುಪಿ: ಆನ್ಲೈನ್ ಕಂಪನಿಗಳನ್ನು ಹೇಗೆ ನಂಬುವುದು ಎಂದು ಜನ ಇದೀಗ ಮತ್ತೆ ಭೀತಿಗೊಳಗಾಗಿದ್ದಾರೆ. ಆನ್ಲೈನ್ ಮೂಲಕ ಸಾಕಷ್ಟು ವ್ಯವಹಾರಗಳು ನಡೆಯುತ್ತಲೇ ಇದೆ, ಜನರು ಮನೆಯಲ್ಲಿ ಕೂತು ಮೊಬೈಲ್ ಮೂಲಕ ಆನ್‌ಲೈನ್ ಆರ್ಡರ್ ಮಾಡಿದರೆ ಮನೆಗೆ ವಸ್ತುಗಳು ಬಂದುಬಿಡುತ್ತದೆ. ಇತ್ತೀಚಿಗೆ ಸರಿಯಾಗಿ ಜನರು ಅಂಗಡಿ-ಮುಂಗಟ್ಟುಗಳ ಕಡೆಗೆ ಮುಖ ಮಾಡುವುದನ್ನೆ ಮರೆತುಬಿಟ್ಟಿದ್ದಾರೆ. ಆದರೆ ಕೆಲವೊಮ್ಮೆ ಈ ಆನ್ಲೈನ್ ಆರ್ಡರ್ ಮೂಲಕ ಕೂಡ ಮೋಸ ಹೋಗುತ್ತಾರೆ, ಅನ್ನೋದಕ್ಕೆ ಇಂದು ಮಣಿಪಾಲ ಮಹಿಳೆಯೊಬ್ಬರಿಗೆ ಆದ ವಂಚನೆಯಿಂದ ಗಮನಿಸಬಹುದು.
ಮಣಿಪಾಲದ ನಿವಾಸಿ ಸುಲೋಚನ ಎನ್ನೋರು ಫ್ಲಿಪ್ಕಾರ್ಟ್ ಮೂಲಕ ಕುಕ್ಕರನ್ನು ಆರ್ಡರ್ ಮಾಡಿದರು, ಆರ್ಡರ್ ಮಾಡಿದ ಪ್ರಕಾರ ಕುಕ್ಕರ್ ಬಂದಿದೆ ಅದನ್ನು ಮೂರು ಸಾವಿರ ರೂಪಾಯಿ ಕೊಟ್ಟು ಖರೀದಿ ಮಾಡುತ್ತಾರೆ, ಆದರೆ ತೆಗೆದು ನೋಡುವಾಗ ಅಲ್ಲಿ ಕುಕ್ಕರ್ ಇಲ್ಲ ಮನೆ ಕಟ್ಟುವ ಇಟ್ಟಿಗೆ ಇತ್ತು, ಇದರಿಂದ ಆಶ್ಚರ್ಯಗೊಂಡ ಸುಲೋಚನ ಫ್ಲಿಪ್ಕಾರ್ಡ್ ಕಂಪನಿಗೆ ಕಂಪ್ಲೇಂಟ್ ಮಾಡಿದ್ದಾರೆ, ಇವರಿಗೆ ಫ್ಲಿಪ್ಕಾರ್ಡ್ ಕಂಪನಿಯಿಂದ ಮೋಸ ಆಗಿದೆಯಾ ಅಥವಾ ಕೋರಿಯರ್ ಹುಡುಗರ ಕರಾಮತ್ತು ಏನಾದರೂ ಇದೆಯಾ ಎಂದು ತಿಳಿಯಬೇಕಾಗಿದೆ.
Kshetra Samachara
24/11/2020 06:17 pm