ಕುಂದಾಪುರ: ಬೇಟೆಗಾರನ ಬೆನ್ನಟ್ಟಿ ಬೇಟೆಯಾಡಿದ ಘಟನೆ ಉಡುಪಿ ಜಿಲ್ಲೆ ಕುಂದಾಪುರದಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಕಾಡುಗಳಲ್ಲಿ ಬೇಟೆಯಾಡುತ್ತಿದ್ದ ಗುಂಪೊಂದನ್ನು ಸ್ಕಾರ್ಪಿಯೋ ಗಾಡಿ ಮೂಲಕ ಬೆನ್ನಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿಗಳು. ಇದು ಸಿನಿಮಾ ರೀತಿಯಲ್ಲಿ ಸ್ಕ್ರೀನ್ ಪ್ಲೇ ಘಟನೆ ನಡೆದಿದೆ. ಸುಮಾರು ಅರ್ಧ ಗಂಟೆಗಳ ಕಾಲ 15 ಕಿ.ಮೀ ಚೇಸಿಂಗ್ ಮಾಡಿದ ಅರಣ್ಯ ಇಲಾಖೆಯವರು ಬೇಟೆಗಾರರ ಬೊಲೆರೋ ವಾಹನ ವಶಕ್ಕೆ ಪಡೆದಿದ್ದು ಈ ವೇಳೆ ವಾಹನದಲ್ಲಿದ್ದ ಬೇಟೆಗಾರರು ಪರಾರಿಯಾಗಿದ್ದಾರೆ.ಕುಂದಾಪುರ ವಲಯ ಅರಣ್ಯಾಧಿಕಾರಿಗಳಿಂದ ಬುಧವಾರ ತಡರಾತ್ರಿ ಗುರುವಾರ ಮುಂಜಾನೆ ನಡೆದ ಘಟನೆ ಇದಾಗಿದೆ.
ಈ ವೇಳೆ ಇಲಾಖೆಯವರನ್ನು ಕಂಡ ಬೇಟೆಗಾರರು ತಮ್ಮ ಕೆ.ಎ.-09- ಪಿ-7218 ನೋಂದಣಿಯ ಬೊಲೆರೋ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಹರ್ಕೂರು ಮಾರ್ಗವಾಗಿ ಬಗ್ವಾಡಿ ಕ್ರಾಸ್ ಸಮೀಪ ಆರೋಪಿಗಳ ವಾಹನವನ್ನು ಇಲಾಖಾ ಜೀಪಿನಲ್ಲಿ ಬೆನ್ನತ್ತಿದ್ದು ಕೆಂಚನೂರು ಬಳಿ ಮನೆಯ ಸಮೀಪದ ತೆಂಗಿನ ಮರಕ್ಕೆ ಬೊಲೆರೋ ಗುದ್ದಿದ ಬೇಟೆಗಾರರು ವಾಹನ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.ಬೊಲೆರೋದಲ್ಲಿ ನಾಲ್ವರು ಆರೋಪಿಗಳಿದ್ದ ಶಂಕೆಯಿದ್ದು ಇಲಾಖಾಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ವಾಹನದಲ್ಲಿದ್ದ ಕಬ್ಬಿಣದ ರಾಡು, ಟಾರ್ಪಲ್, ಮೊಬೈಲ್ ವಶಕ್ಕೆ ಪಡೆಯಲಾಗಿದೆ.
Kshetra Samachara
19/11/2020 04:04 pm