ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಬಿದ್ರಿ: ಲಾಕ್ ತುಂಡರಿಸಿ ಬೈಕ್ ಚಲಾಯಿಸುತ್ತಿದ್ದ ಯುವಕ ಪೊಲೀಸರ ವಶಕ್ಕೆ

ಪಡುಬಿದ್ರಿ : ಇಲ್ಲಿನ ಪೇಟೆ ಬಳಿ ನಿಲ್ಲಿಸಿ ಹೋಗುತ್ತಿದ್ದ ಬೈಕನ್ನು ಯುವಕನೋರ್ವ ಲಾಕ್ ತುಂಡರಿಸಿ ನಿರಂತರವಾಗಿ ಚಲಾಯಿಸುತ್ತಿದ್ದು, ಮಂಗಳವಾರ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಬಳಿಕ ಆತನನ್ನು ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ್ದಾರೆ.

ಪಡುಬಿದ್ರಿ ದೇವಳದ ಬಳಿಯ ನಿವಾಸಿಯೋರ್ವರು ಪೇಟೆ ಸಮೀಪದ ಮಹಾದೇವಿ ಕಟ್ಟಡದ ಬಳಿ ದಿನನಿತ್ಯ ಬೈಕ್ ನಿಲ್ಲಿಸಿ ಬಸ್ಸಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದು, ಇದನ್ನು ಗಮನಿಸುತ್ತಿದ್ದ ಅದೇ ಕಟ್ಟಡದಲ್ಲಿ ಮಿಕ್ಸಿ ರಿಪೇರಿ ಅಂಗಡಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಪಣಿಯೂರು ನಿವಾಸಿ ಯುವಕ ಬೈಕಿನ ಲಾಕ್ ತುಂಡರಿಸಿ ತಿರುಗಾಟ ನಡೆಸಲಾರಂಭಿಸಿದ್ದ.

ಮಂಗಳವಾರ ಯಾವುದೋ ಅನಿವಾರ್ಯ ಕಾರಣಕ್ಕೆ ಕೆಲಸದಿಂದ ಕೊಂಚ ಬೇಗನೆ ಆಗಮಿಸಿದ್ದ ಬೈಕ್ ಮಾಲಿಕ, ಬೈಕ್ ಇಟ್ಟ ಸ್ಥಳದಲ್ಲಿ ಕಾಣದಿದ್ದಾಗ ಸ್ಥಳೀಯರಲ್ಲಿ ವಿಚಾರಿಸಿದಾಗ ಗೊಂದಲ ಏರ್ಪಟಿತ್ತು. ಅದೇ ವೇಳೆ ಬೈಕನ್ನು ಕೊಂಡೊಯ್ದ ಯುವಕ ಸ್ಥಳಕ್ಕೆ ಬಂದು

ಬೈಕಿಟ್ಟು ಓಡಲಾರಂಭಿಸಿದ್ದು, ತಕ್ಷಣ ಸ್ಥಳೀಯರು ಆತನನ್ನು ಹಿಡಿದು ವಿಚಾರಿಸಿದ್ದಾರೆ. ಆ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

04/11/2020 12:11 pm

Cinque Terre

21.09 K

Cinque Terre

0

ಸಂಬಂಧಿತ ಸುದ್ದಿ