ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸಹಕಾರಿ ಸಂಘದಿಂದ 75 ಲಕ್ಷ ರೂ.ಮೋಸ: ಮಹಿಳೆಯ ಕಣ್ಣೀರು!

ಕಾರ್ಕಳ: ಬೋಳ ವ್ಯವಸಾಯ ಸಹಕಾರಿ ಸಂಘದಲ್ಲಿ ಕಾರ್ಯದರ್ಶಿಯಾಗಿದ್ದ ತಮ್ಮ ಮೃತ ಪತಿ ಸೊಸೈಟಿಯಲ್ಲಿ ಅವ್ಯವಹಾರ ನಡೆಸಿದ್ದಾರೆಂದು ಆರೋಪಿಸಿ ಸೊಸೈಟಿಯವರು ನಮ್ಮಿಂದ 75 ಲಕ್ಷ ರೂ. ಕಟ್ಟಿಸಿಕೊಂಡು ಹಿಂಸೆ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಕಣ್ಣೀರಿಟ್ಟಿದ್ದಾರೆ.ಸೊಸೈಟಿಯವರು ನಕಲಿ ದಾಖಲೆ ಸೃಷ್ಠಿಸಿ, ಫೋರ್ಜರಿ ಸಹಿ ಮಾಡಿ ಪತಿಯಿಂದ ತಮಗೆ ಸಿಗಬೇಕಾದ ಸರಕಾರಿ ಸೌಲಭ್ಯದಿಂದ ವಂಚಿತರನ್ನಾಗಿಸಿದ್ದಾರೆ ಎಂದು ಕಾರ್ಕಳ ತಾಲೂಕಿನ ಸಾಂತೂರು ನಿವಾಸಿ ಪ್ರಮೀಳಾ ಶೆಟ್ಟಿ ಆರೋಪಿಸಿದ್ದಾರೆ.

ನನ್ನ ಪತಿ ಸುಮಾರು 30 ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿ 2011ರ ಸೆ.10ರಂದು ಅನಾರೋಗ್ಯದಿಂದ ನಿಧನರಾದರು. ಉತ್ತಮ ನಡತೆ ಹೊಂದಿದ್ದ ನನ್ನ ಪತಿ ಸೊಸೈಟಿಗೆ ಮೋಸ ಮಾಡಿದ್ದಾ ರೆಂದು ಆಡಳಿತ ಮಂಡಳಿ 2012ರ ಜ.6ರಂದು ಏಕಾಏಕಿ ಆರೋಪ ಹೊರಿಸಿತು. ಹಣ ಪಾವತಿಸದಿದ್ದರೆ ಆಸ್ತಿ ಮುಟ್ಟುಗೋಲು ಹಾಕುವ ಬೆದರಿಕೆ ಹಾಕಲಾಯಿತು. ಪತಿಯ ಹೆಸರಿನ ಆಸ್ತಿಯನ್ನು ಒತ್ತಾಯ ಪೂರ್ವಕವಾಗಿ ಮಾರಾಟ ಮಾಡಿಸಿ 75ಲಕ್ಷ ರೂ. ಸೊಸೈಟಿಗೆ ಪಾವತಿಸುವಂತೆ ಅವರು ಮಾಡಿದ್ದಾರೆ ಎಂದರು.

ಮರಣ ನಂತರ ಪತಿಗೆ ಸಲ್ಲಬೇಕಾಗಿದ್ದ ಸರಕಾರಿ ಸೇರಿದಂತೆ ಇನ್ನಿತರ ಸೌಲಭ್ಯ ಗಳನ್ನು ತಡೆ ಹಿಡಿದಿರುವ ಸೊಸೈಟಿಯವರು, ಅನುಮತಿ ಇಲ್ಲದೆ ಸೊಸೈಟಿಯ ಭದ್ರತಾ ಲಾಕರ್‌ನಲ್ಲಿಟ್ಟಿದ್ದ ಸುಮಾರು 200ಗ್ರಾಪಂ ಚಿನ್ನಾಭರಣಗಳನ್ನು ಮತ್ತು ಕುಟುಂಬ ಸದಸ್ಯರ ಆಸ್ತಿಗಳನ್ನು ಮುಟ್ಟು ಗೋಲು ಹಾಕಿಕೊಂಡಿದ್ದಾರೆ ಎಂದು ಅವರು ದೂರಿದ್ದಾರೆ.

ಇದೀಗ ಈ ಮಹಿಳೆಯ ನೆರವಿಗೆ ಧಾವಿಸಿರುವ ಕರ್ನಾಟಕ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿ ಶೆಟ್ಟಿ ಈ ಪ್ರಕರಣದ ಬಗ್ಗೆ ಕೂಲಂಕಷ ಪರಿಶೀಲಿಸಿ ಕಾನೂನಿನಂತೆ ಸೊಸೈಟಿಯವರ ವಿರುದ್ಧ ಪ್ರಕರಣ ದಾಖಲಿಸಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಬೇಕು. ದೂರುರಾದ ಕುಟುಂಬಗಳಿಗೆ ಸೂಕ್ತ ಭದ್ರತೆ ನೀಡಬೇಕು. ಪ್ರಮೀಳಾ ಕುಟುಂಬಕ್ಕೆ ನೀಡಿರುವ ಮಾನಸಿಕ ಹಿಂಸೆ, ಮಾನನಷ್ಟ ಹಾಗೂ ಇತರ ಖರ್ಚು ಗಳನ್ನು ಸೊಸೈಟಿಯವರಿಂದ ತೆಗೆಸಿಕೊಡಬೇಕು. ಅನಧಿಕೃತವಾಗಿ ಕಟ್ಟಿಸಿಕೊಂಡ 75ಲಕ್ಷ ರೂ. ಹಣವನ್ನು ದೂರು ಇತ್ಯರ್ಥ ಆಗುವವರಿಗೆ ಕೋರ್ಟಿನ ಸುಪರ್ದಿಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

18/09/2021 10:21 pm

Cinque Terre

35.08 K

Cinque Terre

1

ಸಂಬಂಧಿತ ಸುದ್ದಿ