ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕರ್ತವ್ಯ ನಿರತ ಮುಖ್ಯ ಪೇದೆ ಮೇಲೆ ತಲ್ವಾರ್ ದಾಳಿ

ಮಂಗಳೂರು: ಕರ್ತವ್ಯನಿರತ ಮುಖ್ಯ ಪೇದೆ ಮೇಲೆ ದುಷ್ಕರ್ಮಿಯೋರ್ವ ಹಾಡಹಗಲೇ ತಲ್ವಾರ್‌ ದಾಳಿ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

ಬಂದರ್ ಠಾಣೆಯ ಗಣೇಶ್ ಕಾಮತ್ ತಲ್ವಾರ್ ದಾಳಿಗೆ ಒಳಗಾದ ಹೆಡ್‌ ಕಾನ್‌ಸ್ಟೇಬಲ್. ನಗರದ ರಥಬೀದಿ ಸಮೀಪದ ಚಿತ್ರಮಂದಿರವೊಂದರ ಬಳಿ‌ ಘಟನೆ ನಡೆದಿದ್ದು, ಗಾಯಗೊಂಡ ಗಣೇಶ್‌ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಣೇಶ್‌ ಅವರು ಇಬ್ಬರು ಸಿಬ್ಬಂದಿ ಜೊತೆ ರಥಬೀದಿಯಲ್ಲಿ ವಾಹನಗಳ ತಪಾಸಣೆಯಲ್ಲಿ ತೊಡಗಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಯೋರ್ವ ಮುಖ್ಯ ಪೇದೆ ಗಣೇಶ್‌ ಕಾಮತ್‌ ಅವರ ಮೇಲೆ ತಲ್ವಾರ್‌ನಿಂದ ದಾಳಿ ನಡೆಸಿದ್ದಾನೆ. ಪರಿಣಾಮ ಗಣೇಶ್‌ ಅವರ ಕೈಗೆ ಬಲವಾದ ಏಟು ಬಿದ್ದಿದೆ. ದಾಳಿಗೆ ಮಾಡಿದ್ದು ಯಾರು ಹಾಗೂ ಯಾಕೆ ಎನ್ನುವ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿದೆ.

ಬಂದರ್ ಪೊಲೀಸರು‌ ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : Vijay Kumar
Kshetra Samachara

Kshetra Samachara

16/12/2020 07:07 pm

Cinque Terre

40.87 K

Cinque Terre

5

ಸಂಬಂಧಿತ ಸುದ್ದಿ