ಮಂಗಳೂರು: ಮೊನ್ನೆ ಬಜ್ಪೆಯ ಕಂದಾವರದಲ್ಲಿ ಹಲ್ಲೆಗೊಳಗಾಗಿದ್ದ ಅಬ್ದುಲ್ಲಾ ವೆಂಜ್ ಎಂಬುವವರ ಪುತ್ರಿಯ ಗಂಡನ ಮೇಲೆ ಕೊಲೆ ಯತ್ನ ಮಂಗಳೂರಲ್ಲಿ ರಾತ್ರಿ ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು 26 ವರ್ಷದ ಉಪ್ಪಾಳ ನಿವಾಸಿ ನೌಷಾದ್ ಎಂದು ಗುರುತಿಸಲಾಗಿದೆ. ಮೂವರ ತಂಡವೊಂದು ಯುನಿಟಿ ಆಸ್ಪತ್ರೆಯ ಮುಖ್ಯದ್ವಾರದ ಬಳಿ ಕೊಲೆಯತ್ನ ನಡೆಸಿ ಪರಾರಿಯಾಗಿದೆ. ಹಲ್ಲೆಗೊಳಗಾದ ಯುವಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
Kshetra Samachara
24/11/2020 08:06 am