ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ : ಹಿರಿಯ ಸಿಬ್ಬಂದಿಗೆ ಜವಾನನಿಂದಲೇ ಹಲ್ಲೆ..!

ಕಡಬ : ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಗ್ರಾಮ ಪಂಚಾಯತ್ ನ ತಾತ್ಕಾಲಿಕ ನೆಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜವಾನ ಕಚೇರಿಯಲ್ಲಿ ದಾಂಧಲೆ ನಡೆಸಿ ಹಿರಿಯ ಸಿಬ್ಬಂದಿಗೆ ಹೊಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರುನಡೆದಿದೆ.

ಗಣನಾಥ ಎಂಬುವವರು ಹಿರಿಯ ಸಿಬ್ಬಂದಿ ಬಿಲ್ ಕಲೆಕ್ಟರ್ ಶಿಬು ಎಂಬವರಿಗೆ ಹಲ್ಲೆ ಮಾಡಿದ್ದಾರೆ. ಈತ ವಾರದ ಹಿಂದೆಯೇ ಬಾಟಲಿಯೊಂದನ್ನು ತುಂಡರಿಸಿ ಕಚೇರಿಯೊಳಗೆ ಇಟ್ಟುಕೊಂಡಿದ್ದ.

ಇದನ್ನು ಅಲ್ಲಿನ ಸಹೋದ್ಯೋಗಿಗಳು ಪಿಡಿಒ ಅವರ ಗಮನಕ್ಕೆ ತಂದಿದ್ದರು. ಅಲ್ಲದೇ ಕಾಲಹರಣ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕೆಲಸದಿಂದ ತೆಗೆದು ಹಾಕುವಂತೆ ಈ ಹಿಂದೆ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಇದೀಗ ಈತ ಹಲ್ಲೆ ನಡೆಸಿರುವ ವೀಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Edited By : Nagesh Gaonkar
Kshetra Samachara

Kshetra Samachara

18/11/2020 05:17 pm

Cinque Terre

34.32 K

Cinque Terre

7

ಸಂಬಂಧಿತ ಸುದ್ದಿ