ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ ಪರಿಸರದಲ್ಲಿ ನಕಲಿ ನೋಟು ಚಲಾವಣೆಯಲ್ಲಿ ವಂಚಕರ ಜಾಲ ಸಕ್ರಿಯ!

ಮುಲ್ಕಿ: ಕಿನ್ನಿಗೋಳಿ ಪರಿಸರದಲ್ಲಿ ನಕಲಿ ನೋಟಿನ ವಂಚಕರ ಜಾಲ ಹೆಚ್ಚುತ್ತಿದ್ದು, ಹಣದ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಮಾಜಿ ಪಂಚಾಯತ್ ಸದಸ್ಯ ಜೀವನ್ ಕುಮಾರ್ ಹೇಳಿದ್ದಾರೆ.

ಕೆಲವು ತಿಂಗಳಿಂದ ಕಿನ್ನಿಗೋಳಿ ಪರಿಸರದಲ್ಲಿ ನಕಲಿ ನೋಟು ಒಬ್ಬರಿಂದ ಇನ್ನೊಬ್ಬರ ಕೈಗೆ ಚಲಾವಣೆ ಆಗುವ ಕೆಲಸ ಸದ್ದಿಲ್ಲದೆ ನಡೆಯುತ್ತಿದ್ದು, ಜನ ಸಾಮಾನ್ಯರಲ್ಲಿ 100 ಮತ್ತು 200 ನೋಟ್ ಅಸಲಿ ಯಾವುದು ನಕಲಿ ಯಾವುದು? ತಿಳಿಯದಂತೆ ಆಗಿದೆ ಎಂದು ತಿಳಿಸಿದ್ದಾರೆ.

ನೋಟಿನ ಕಲರ್ ಜೆರಾಕ್ಸ್ ಮಾಡಿ ಅದರ ಮೇಲೆ ಹಸಿರು ಬಣ್ಣದ ಪ್ಲಾಸ್ಟಿಕ್ ಕವರ್ ತುಂಡು ಮಾಡಿ ಅಟ್ಟಿಸಿದ್ದು ಅನೇಕ ಗ್ರಾಹಕರು ಅದರಲ್ಲೂ ವೃದ್ಧರು ಮತ್ತು ಮಹಿಳೆಯರು ಮೋಸ ಹೋಗುತ್ತಿದ್ದಾರೆ. ಕಿನ್ನಿಗೋಳಿ ಪರಿಸರದಲ್ಲಿ ನಕಲಿ ನೋಟು ವಂಚನೆಯ ಬೃಹತ್ ಜಾಲವೇ ಇದ್ದು, ನಾಗರಿಕರು ಜಾಗೃತರಾಗಿ ವ್ಯಾಪಾರ ವಹಿವಾಟು ನಡೆಸುವಾಗ ಸರಿಯಾಗಿ ನೋಟನ್ನು ನೋಡಿಕೊಂಡು ಮೋಸ ಹೋಗುವ ಮುನ್ನ ಎಚ್ಚರಿಕೆ ವಹಿಸಬೇಕಾಗಿ ಜೀವನ್ ಕುಮಾರ್ ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

15/11/2020 02:19 pm

Cinque Terre

16.63 K

Cinque Terre

3

ಸಂಬಂಧಿತ ಸುದ್ದಿ