ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮೀನುಗಾರಿಕೆ ನಡೆಸುತ್ತಿದ್ದ ಯುವಕ ಸ್ವರ್ಣಾ ನದಿ ಪಾಲು!

ಉಡುಪಿ: ಇಲ್ಲಿಗೆ ಸಮೀಪದ ಕಲ್ಯಾಣಪುರ ಸಂತೆಕಟ್ಟೆಯ ಕಡುವಿನಬಾಗಿಲು ಎಂಬಲ್ಲಿ ಮೀನುಗಾರರೊಬ್ವರು ದೋಣಿಯಿಂದ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಶಿವರಾಜ್ ( 32) ಮೃತ ಮೀನುಗಾರರಾಗಿದ್ದಾರೆ.

ಇವರು ಎಂದಿನಂತೆ ಇಲ್ಲಿನ ಸ್ವರ್ಣಾ ನದಿಗೆ ಮೀನುಗಾರಿಕೆ ನಡೆಸಲು ತೆರಳಿದ್ದರು.ಮೀನುಗಾರಿಕೆ ನಡೆಸುವ ವೇಳೆ ಅಕಸ್ಮಾತ್ತಾಗಿ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ.ತಕ್ಷಣ ಅಗ್ನಿಶಾಮಕ ದಳ ಮತ್ತು ಮುಳುಗು ತಜ್ಞ ಈಶ್ವರ್ ಮಲ್ಪೆ ನೀರಿಗೆ ಬಿದ್ದ ಮೀನುಗಾರನಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಸಿದರೂ ಸಿಕ್ಕಿರಲಿಲ್ಲ. ಕೊನೆಗೆ ಸ್ವರ್ಣಾ ನದಿಯಲ್ಲಿ ಶಿವರಾಜ್ ಮೃತದೇಹ ಸಿಕ್ಕಿದ್ದು ಅದನ್ನು ಮೇಲಕ್ಕೆತ್ತಲಾಗಿದೆ. ಈ ಬಗ್ಗೆ ಮಲ್ಪೆ .ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
Kshetra Samachara

Kshetra Samachara

08/10/2022 04:36 pm

Cinque Terre

18.78 K

Cinque Terre

0

ಸಂಬಂಧಿತ ಸುದ್ದಿ