ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಚಲಿಸುತ್ತಿದ್ದ ಲಾರಿಯಡಿ ಹಾರಿ‌ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.!

ಸುಳ್ಯ: ಸುಳ್ಯದ ಗಾಂಧಿನಗರ ಮುಖ್ಯ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿರುವ ‌ಲಾರಿಯಡಿಗೆ ಹಾರಿ‌ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಉತ್ತರ ಕರ್ನಾಟಕ ಮೂಲದ ಕೂಲಿ ಕಾರ್ಮಿಕ ಮಂಜುನಾಥ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ತೆಂಗಿನಕಾಯಿ ತುಂಬಿಸಿಕೊಂಡು ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಯನ್ನು ಗಮನಿಸಿದ ವ್ಯಕ್ತಿ ಹಿಂದಿನ ಚಕ್ರಕ್ಕೆ ಡೈವ್ ಮಾಡಿದ್ದಾನೆ. ಚಕ್ರಕ್ಕೆ ಸಿಲುಕಿದ ಆತನನ್ನು ಲಾರಿ ಸ್ವಲ್ಪ ದೂರ ಎಳೆದೊಯ್ದಿದೆ. ಪರಿಣಾಮ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಆತನನ್ನು ತಕ್ಷಣ ಸುಳ್ಯ ಸರ್ಕಾರಿ ಆಸ್ಪತ್ರೆಗೆ‌ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.‌ ಘಟನೆಯ ದೃಶ್ಯ ‌ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Edited By :
PublicNext

PublicNext

20/04/2022 06:41 pm

Cinque Terre

60.84 K

Cinque Terre

2

ಸಂಬಂಧಿತ ಸುದ್ದಿ