ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ರಸ್ತೆ ಅಪಘಾತ; ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ಮೃತ್ಯು

ಮೂಡುಬಿದಿರೆ: ಓಮ್ನಿ ಕಾರು ಹಾಗೂ ಬೈಕ್ ಡಿಕ್ಕಿಯಾದ ಪರಿಣಾಮ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ (47) ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮೂಡುಬಿದಿರೆ ತಾಲೂಕಿನ ಗಂಟಾಲ್ಕಟ್ಟೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ‌.

ಶ್ರೀ ವೀರಭದ್ರ ದಶಾವತಾರ ಯಕ್ಷಗಾನ ಮಂಡಳಿ ಹಿರಿಯಡ್ಕ ಮೇಳದ ಕಲಾವಿದರಾಗಿ ದುಡಿಯುತ್ತಿದ್ದ ವಾಮನ ಕುಮಾರ್, ನಿನ್ನೆ ರಾತ್ರಿ ಕುಂದಾಪುರದ ಕೊಂಕಿ ಎಂಬಲ್ಲಿ ಯಕ್ಷಗಾನವನ್ನು ಮುಗಿಸಿ ಬೈಕ್ ನಲ್ಲಿ ಮನೆಗೆ ಮರಳುವಾಗ ಮುಂಜಾನೆ ಸುಮಾರು 6.30ಕ್ಕೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ಮೃತಪಟ್ಟರು.

ಸ್ತ್ರೀ ವೇಷಧಾರಿಯಾಗಿ ಪ್ರಸಿದ್ಧಿ ಪಡೆದಿರುವ ವಾಮನ ಕುಮಾರ್ , ಇತ್ತೀಚಿನ ವರ್ಷಗಳಲ್ಲಿ ಪುರುಷ ವೇಷವನ್ನೂ ಮಾಡುತ್ತಿದ್ದರು‌.‌ ಧರ್ಮಸ್ಥಳ ಕೇಂದ್ರದಲ್ಲಿ ಯಕ್ಷನಾಟ್ಯವನ್ನು ಅಭ್ಯಾಸ ಮಾಡಿದ ವಾಮನ್, ಮೊದಲಿಗೆ ಧರ್ಮಸ್ಥಳ ಮೇಳದಲ್ಲಿಯೇ ತಮ್ಮ ಯಕ್ಷ ಪಯಣ ಆರಂಭಿಸಿದ್ದರು‌. ಆ ಬಳಿಕ ಕದ್ರಿ ಮೇಳ, ಮಂಗಳಾದೇವಿ ಮೇಳ ಇದೀಗ ಹಿರಿಯಡ್ಕ ಮೇಳದ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದರು. ಯಕ್ಷಗಾನದಲ್ಲಿ 28 ವರ್ಷಗಳ ತಿರುಗಾಟವನ್ನು ಮಾಡಿದ್ದಾರೆ.

Edited By : Vijay Kumar
Kshetra Samachara

Kshetra Samachara

20/01/2022 10:15 am

Cinque Terre

17.61 K

Cinque Terre

9

ಸಂಬಂಧಿತ ಸುದ್ದಿ