ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕುಡಿತ ಮತ್ತಿನಲ್ಲಿ ಅಪಘಾತ; ಯುವಕರಿಗೆ ಬಿತ್ತು ಹೊಡೆತ

ಉಡುಪಿ: ಉಡುಪಿಯಲ್ಲಿ ಮದ್ಯ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ, ಅವಾಂತರ ಸೃಷ್ಟಿಸಿದ ಯುವಕರಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.

ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ ಮೂವರು ಯುವಕರು ಕಾರಿನಲ್ಲಿದ್ದರು. ಕುಡಿದ ಮತ್ತಿನಲ್ಲಿ ಚಾಲಕ ಕಾರನ್ನು ಯರ್ರಾಬಿರ್ರಿ ಚಲಾಯಿಸಿ ಕಂಪೌಂಡ್ ಗೋಡೆಗೆ ಗುದ್ದಿ, ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ತಾಯಿ- ಮಗು ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ!

ಯುವಕರ ಈ ಅವಾಂತರಕ್ಕೆ ಆಕ್ರೋಶಗೊಂಡ ಸಾರ್ವಜನಿಕರು ಚಾಲಕ ಮತ್ತು ಕಾರೊಳಗಿದ್ದವರಿಗೆ ಧರ್ಮದೇಟು ನೀಡಿದ್ದಾರೆ. ಇವರ ಅವಾಂತರದಿಂದಾಗಿ ಎರಡು ಕಾರುಗಳು ನಜ್ಜುಗುಜ್ಜಾಗಿವೆ. ವಿಷಯ ತಿಳಿದು ಸ್ಥಳಕ್ಜೆ ನಗರ ಠಾಣೆಯ ಹೊಯ್ಸಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಈ ಯುವಕರನ್ನು ಠಾಣೆಗೆ ಕರೆದುಕೊಂಡು ಹೋದರು.

Edited By : Manjunath H D
PublicNext

PublicNext

11/01/2022 03:56 pm

Cinque Terre

63.47 K

Cinque Terre

4

ಸಂಬಂಧಿತ ಸುದ್ದಿ