ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಹೋರಿ ತಿವಿದು ವ್ಯಕ್ತಿ ಸಾವು: ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಸುಳ್ಯ: ಹೋರಿಯೊಂದು ತಿವಿದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಮುರುಳ್ಯದ ಕೋಡಿಯಡ್ಕದಿಂದ ವರದಿಯಾಗಿದೆ .

ಮುರುಳ್ಯ ಗ್ರಾಮದ ಪೂದೆಯ ಕಿಟ್ಟಣ್ಣ ಗೌಡ ಕೋಡಿಯಡ್ಕ ಎಂಬವರು ಮೃತಪಟ್ಟ ವ್ಯಕ್ತಿ. ತಾನು ಸಾಕಿರುವ ಹೋರಿಯನ್ನು ತೋಟದಲ್ಲಿ ಮೇಯಲು ಕಟ್ಟಿದ್ದು ಸಂಜೆ ವೇಳೆಗೆ ಹೋರಿಯನ್ನು ಹಟ್ಟಿಗೆ ತರಲು ಕಿಟ್ಟಣ್ಣ ಗೌಡ ತೆರಳಿದ್ದರು ಎನ್ನಲಾಗಿದೆ. ಅಲ್ಲಿ ಹೋರಿ ತಿವಿದು ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂದು ಆ ದಾರಿಯಲ್ಲಿ ಬಂದ ವ್ಯಕ್ತಿಯೋರ್ವರಿಗೆ ಕಿಟ್ಟಣ್ಣ ಗೌಡರು ಬಿದ್ದುಕೊಂಡಿರುವುದು ಕಂಡುಬಂದಿದ್ದು, ಅಲ್ಲೇ ಪಕ್ಕದಲ್ಲಿ ಹೋರಿ ಕಟ್ಟಿ ಹಾಕಿರುವುದನ್ನು ನೋಡಿದ್ದಾರೆ. ಈ ವ್ಯಕ್ತಿ ಹತ್ತಿರ ಹೋಗಿ ನೋಡುವಾಗ ಕಿಟ್ಟಣ್ಣ ಗೌಡರು ಮೃತಪಟ್ಟಿರುವುದು ತಿಳಿದು ಬಂತು.

ಈ ಬಗ್ಗೆ ಬೆಳ್ಳಾರೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿದ್ದಾರೆ. ಮೃತ ಶರೀರವನ್ನು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಲಾಯಿತು. ಮೃತರಿಗೆ 55ವರ್ಷ ವಯಸ್ಸಾಗಿದ್ದು,ಅವಿವಾಹಿತರಾಗಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

13/12/2021 09:51 am

Cinque Terre

14.88 K

Cinque Terre

0

ಸಂಬಂಧಿತ ಸುದ್ದಿ