ಬಜಪೆ:ಬಸ್ಸಿಗಾಗಿ ಕಾಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಅತೀ ವೇಗದಿಂದ ಬರುತ್ತಿದ್ದ ಓಮ್ನಿ ಕಾರೊಂದು ಡಿಕ್ಕಿಹೊಡೆದ ಪರಿಣಾಮ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಎಡಪದವಿನಲ್ಲಿ ನಡೆದಿದೆ.
ಘಟನೆಯಲ್ಲಿ ಸಾವನ್ನಪ್ಪಿದವರನ್ನು ಎಡಪದವು ಪದ್ರೆಂಗಿಯ ನಿವಾಸಿ ಅರುಣ್ ಅಡ್ಯಂತಾಯ (40)ಎಂದು ಗುರುತಿಸಲಾಗಿದೆ.ಇವರು ಬಸ್ಸೊಂದರ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಡಿಕ್ಕಿ ಹೊಡೆದ ಓಮ್ನಿ ಕಾರನ್ನು ಚಾಲಕನು ನಿಲ್ಲಿಸದೆ ಪರಾರಿಯಾಗಿದ್ದು,ಅಲ್ಲದೆ ಗಂಜಿಮಠದಲ್ಲೂ ವಾಹನವೊಂದಕ್ಕೂ ಡಿಕ್ಕಿಹೊಡೆದಿದೆ ಎಂದು ತಿಳಿದುಬಂದಿದೆ.ಘಟನೆಯ ದೃಶ್ಯವು ಸಿಸಿ ಟಿವಿಯಲ್ಲಿ ದಾಖಲಾಗಿದೆ.
ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
28/11/2021 06:30 pm