ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉದ್ಯಮಿಗೆ ಚೂರಿ ಇರಿತ-೪ ಲಕ್ಷ ನಗದು ದೋಚಿ ಪರಾರಿ

ಬೈಕ್‌ನಲ್ಲಿ ತೆರಳುತ್ತಿದ್ದ ಅಡಿಕೆ ವ್ಯಾಪಾರಿಗೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಚೂರಿ ಇರಿದು ವ್ಯಾಪಾರಿಯ ಬಳಿ ಇದ್ದ 4 ಲಕ್ಷ ರೂ. ಹಣವನ್ನು ದೋಚಿದ್ದಾರೆ.

ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ಪೆರ್ನೆ ಎಂಬಲ್ಲಿ ನಡೆದಿದೆ.

ದೀಪಕ್‌ ಶೆಟ್ಟಿ ಕೃಷಿಕರಿಂದ ಅಡಿಕೆ ಖರೀದಿಸಿ ವ್ಯಾಪಾರ ಮಾಡುತ್ತಿದ್ದರು. ಇವತ್ತು ಎಂದಿನಂತೆ ಅಡಿಕೆ ವ್ಯಾಪಾರ ಮಾಡಿ ಅದರಿಂದ ದೊರೆತ 4 ಲಕ್ಷ ರೂ. ನಗದಿನೊಂದಿಗೆ ಬೈಕ್‌ನಲ್ಲಿ ಪೆರ್ನೆ ಒಳಗಿನ ರಸ್ತೆಯಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಇನ್ನೊಂದು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ದೀಪಕ್‌ ಶೆಟ್ಟಿಯ ಬೆನ್ನಿಗೆ ಮತ್ತು ಕುತ್ತಿಗೆಗೆ ಇರಿದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಇದರ ಪರಿಣಾಮ ಅಡಿಕೆ ವ್ಯಾಪಾರಿ ದೀಪಕ್‌ಗೆ ಗಂಭೀರವಾದ ಗಾಯಗಳಾಗಿವೆ‌. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

28/10/2020 03:46 pm

Cinque Terre

19.92 K

Cinque Terre

0

ಸಂಬಂಧಿತ ಸುದ್ದಿ