'ಶಕಲಕ ಬೂಮ್ ಬೂಮ್'' ತುಳು ಸಿನಿಮಾವನ್ನು ಡಿ.16ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಈಗಾಗಲೇ ಘೋಷಿಸಿದ್ದು, ಈ ಮಧ್ಯೆ 'ಇಲ್ಲ್ ಒಕ್ಕೆಲ್''ತುಳು ಸಿನಿಮಾ ತಂಡ ಅದೇ ದಿನಾಂಕದಂದೇ ತಮ್ಮ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿರುವುದು ಗೊಂದಲಮಯ ವಾತಾವರಣ ಸೃಷಿಸಿದೆ ಎಂದು ಚಿತ್ರದ ನಿರ್ಮಾಪಕ ನಿತ್ಯಾನಂದ ನಾಯಕ್ ನರಸಿಂಗೆ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾರರ್, ಥ್ರಿಲ್ಲರ್, ಕಾಮಿಡಿ ಹೊಂದಿರುವ ಹೊಸತನದಿಂದ ಕೂಡಿದ 'ಶಕಲಕ ಬೂಮ್ ಬೂಮ್' ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಪ್ರಥಮ ನವರಾತ್ರಿಯಂದು ಘೋಷಿಸಲಾಗಿತ್ತು. ಆದರೆ ಅ.21ರಂದು ಬಿಡುಗಡೆ ದಿನಾಂಕ ನಿಗದಿಪಡಿಸಿದ್ದ, 'ಇಲ್ ಒಕ್ಕೆಲ್' ಸಿನೆಮಾ ತಂಡವು ಅನಿರೀಕ್ಷಿತವಾಗಿ ಅದೇ ದಿನ ಅವರ ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿದೆ ಎಂದರು.
ಈ ಬಗ್ಗೆ ಎರಡು ತಂಡದವರು ಪರಸ್ಪರ ಮಾತುಕತೆ ನಡೆಸಿದರೂ 'ಇಲ್ ಒಕ್ಕೆಲ್' ತಂಡ ಒಮ್ಮತಕ್ಕೆ ಬಾರದಿರುವುದರಿಂದ ಉಭಯ ತಂಡಗಳ ಚಿತ್ರಕ್ಕೆ ತೊಂದರೆಯಾಗಿದೆ. ತುಳು ಚಿತ್ರರಂಗ ಬೆಳೆಯಬೇಕಾದರೆ ಈ ರೀತಿಯ ಗೊಂದಲ ಉಂಟಾಗದಂತೆ ವ್ಯವಸ್ಥೆ ಮಾಡುವ ಅಗತ್ಯ ಇದೆ ಎಂದು ಅಸಮಾಧಾನ ತೋಡಿಕೊಂಡರು.
PublicNext
11/10/2022 04:34 pm