ಮಂಗಳೂರು:ಕೋಸ್ಟಲ್ ವುಡ್ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವ ತುಳು ಸಿನಿಮಾ ಪ್ರೀಮಿಯರ್ ಶೋ ನಡೆಯಲಿದೆ. ವೈಭವ್ ಫ್ಲಿಕ್ಸ್ ಅಡಿಯಲ್ಲಿ ಮ್ಯಾಂಗೋ ಪಿಕಲ್ ಬ್ಯಾನರ್ ಅಡಿಯಲ್ಲಿ ತಯಾರಾದ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಸಿನಿಮಾ ಮೇ 20 ರಂದು ಬಿಡುಗಡೆಗೊಳ್ಳಲಿದೆ. ಈ ಮುಂಚೆ 11 ಹೊರ ದೇಶಗಳಲ್ಲಿ ಮತ್ತು ದೇಶದ 6 ಕಡೆಗಳಲ್ಲಿ ಮೇ 13, 14, 15 ರಂದು ಪ್ರೀಮಿಯರ್ ಶೋ ನಡೆಯಲಿದೆ.
ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ವಲ್ಡ್ ಪ್ರೀಮಿಯರ್ ಶೋ ಇದರ ಅಧಿಕೃತ ಉದ್ಘಾಟನೆ ಎಪ್ರಿಲ್ 24 ರಂದು ದುಬೈನಲ್ಲಿರುವ ಮಾರ್ಕೊ ಪೊಲೊ ಹೊಟೇಲ್ ನಲ್ಲಿರುವ ಸಭಾಂಗಣದಲ್ಲಿ ನಡೆಯಲಿದೆ. ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳುವಿನಲ್ಲಿ ದೊಡ್ಡ ಬಜೆಟ್ ನ ಸಿನಿಮಾವಾಗಿದೆ. ಈ ಸಿನಿಮಾಕ್ಕಾಗಿ ಒಂದೂವರೆ ಕೋಟಿ ರೂಪಾಯಿಗೂ ಮಿಕ್ಕಿ ಖರ್ಚಾಗಿದೆ. ಒಂದು ಮೊಟ್ಟೆಯ ಕಥೆ ಚಿತ್ರ ತಂಡದ ನೇತೃತ್ವದಲ್ಲಿ ಚಿತ್ರ ನಿರ್ಮಾಣಗೊಂಡಿದೆ.
ಈ ಚಿತ್ರವು ಸಂಪೂರ್ಣ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಆಗಿದ್ದು, ಚಿತ್ರ ಮದುವೆ ಮತ್ತು ಮದರಂಗಿ ಕಾರ್ಯಕ್ರಮದ ಕಥಾ ಹಂದರವನ್ನು ಹೊಂದಿದೆ. ಕೌಟುಂಬಿಕ ಮನೋರಂಜನೆಯ ಜತೆಗೆ ಹಾಸ್ಯಕ್ಕೂ ಪ್ರಾಮುಖ್ಯತೆ ನೀಡಲಾಗಿದೆ. ಈ ಚಿತ್ರವನ್ನು ಯುವ ನಟ ರಾಹುಲ್ ಅಮೀನ್ ನಿರ್ದೇಶಿಸಿದ್ದು, ಆನಂದ್ ಎನ್ ಕುಂಪಲ ನಿರ್ಮಾಪಕರು. ಈ ಸಿನೆಮಾದ ಕಥೆಯನ್ನು ವಿನೀತ್ ಕುಮಾರ್ ಹಾಗೂ ಸಂಭಾಷನೆಯನ್ನು ಗಿರಿಗಿಟ್ ಚಿತ್ರ ಖ್ಯಾತಿಯ ಪ್ರಸನ್ನ ಶೆಟ್ಪಿ ಬೈಲೂರು ಬರೆದಿದ್ದಾರೆ.
ರಾಷ್ಟ್ರೀಯ ಪ್ರಶಸ್ತಿ ವಿಜೇತ ಪಡ್ಡಾಯಿ ಚಿತ್ರ ಖ್ಯಾತಿಯ ಕ್ಯಾಮರಾಮೆನ್ ವಿಷ್ಣುಪ್ರಸಾದ್ ಅವರು ಚಿತ್ರೀಕರಿಸಿದ್ದಾರೆ. ಸಂಗೀತ ನಿರ್ದೇಶಕರಾಗಿ ಸೃಜನ್ ಕುಮಾರ್ ತೋನ್ಸೆ, ನವೀನ್ ಶೆಟ್ಟಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರಕಥೆಯನ್ನು ವಿನೀತ್ ಕುಮಾರ್ ಹಾಗೂ ರಾಹುಲ್ ಅಮೀನ್ ಬರೆದಿದ್ದಾರೆ. ನಾಯಕರಾಗಿ ವಿನೀತ್ ಕುಮಾರ್, ನಾಯಕಿಯಾಗಿ ಯಶ ಶಿವಕುಮಾರ್ ಹಾಗೂ ನಾಯಕಿ ಕರಿಷ್ಮಾ ಅಮೀನ್ ಅಭಿನಯಿಸಿದ್ದಾರೆ.
PublicNext
18/04/2022 05:37 pm