ಪುತ್ತೂರು: ವೇಗಸ್ ಫಿಲಮ್ಸ್ ಲಾಂಛನದಲ್ಲಿ ನಿರ್ಮಾಣಗೊಂಡ, ಹಿರಿಯ ನಿರ್ದೇಶಕ ರಾಮ್ ಶೆಟ್ಟಿ ನಿರ್ದೇಶನದ ತುಳು ಸಿನಿಮಾ ಏರೆಗಾವು ಕಿರಿಕಿರಿ ಮಾರ್ಚ್ 12ರಂದು ಪುತ್ತೂರಿನ ಅರುಣಾ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ನಟ ಸುಂದರ ರೈ ಮಂದಾರ ಹೇಳಿದ್ದಾರೆ.
ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 1.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ತುಳು ಸಿನಿಮಾ ಈಗಾಗಲೇ ಮಂಗಳೂರಿನಲ್ಲಿ ತೆರೆ ಕಂಡಿದೆ. ಇನ್ನು ಪುತ್ತೂರಿನಲ್ಲಿ ಇದೇ ಮೊದಲ ಬಾರಿಗೆ ತುಳು ಚಿತ್ರವನ್ನು ಪುತ್ತೂರಿನ ಚಿತ್ರ ಪ್ರೇಮಿಗಳಿಗಾಗಿ ಬಿಡುಗಡೆ ಮಾಡಲಾಗುತ್ತಿದೆ. ಕುಟುಂಬ ಸಮೇತವಾಗಿ ನೋಡುವ ಚಿತ್ರವಾಗಿ ಏರೆಗಾವು ಕಿರಿಕಿರಿ ಮೂಡಿಬಂದಿದ್ದು, ತುಳು ಚಿತ್ರರಂಗದ ಪ್ರಸಿದ್ಧ ಹಾಸ್ಯನಟರಾದ ನವೀನ್ ಡಿ ಪಡೀಲ್, ಅರವಿಂದ ಬೋಳಾರ್ ಸೇರಿದಂತೆ ಹಲವು ನಟರು ಈ ಚಿತ್ರದಲ್ಲಿ ಅದ್ಭುತ ನಟನೆಯ ಮೂಲಕ ಗಮನಸೆಳೆದಿದ್ದಾರೆ ಎಂದರು.
Kshetra Samachara
10/03/2022 02:43 pm