ಕಟೀಲು: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಖ್ಯಾತ ನಟಿ ಶುಭಾ ಪೂಂಜಾ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು,
ಅತ್ಯಂತ ಸರಳ ರೀತಿಯಲ್ಲಿ ಮಾಮೂಲಿ ಭಕ್ತರಂತೆ ಭೇಟಿ ನೀಡಿದ ನಟಿ ಭೋಜನ ಶಾಲೆಗೆ ಸರಧಿಯಲ್ಲೇ ಸಾಗಿ ಮಾಮೂಲಿ ಎಲ್ಲಾ ಭಕ್ತರಂತೆ ನೆಲದ ಕೂತು ದೇವರ ಅನ್ನಪ್ರಸಾದ ಸ್ವೀಕರಿಸಿದರು.
ನಂತರ ಮಾದ್ಯಮದೊಂದಿಗೆ ಮಾತನಾಡಿದ ಅವರು ಮದುವೆ ಆದರ ನಂತರ ಮೊದಲ ಬಾರಿಗೆ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ. ಕರಾವಳಿ ಅಂದರೆ ತುಂಭಾ ಇಷ್ಟ, ಅದಕ್ಕಾಗಿ ಕರಾವಳಿಯಲ್ಲೇ ಮದುವೆ ಆಗಿದ್ದೇನೆ, ತುಳು ಬಾಷೆ ತುಳು ಸಿನಿಮಾ ಅಂದರೆ ತುಂಬಾ ಇಷ್ಟ ಅವಕಾಶ ಸಿಕ್ಕಿದರೆ ತುಳು ಚಿತ್ರದಲ್ಲಿ ಅಭಿನಯಿಸುವೆ, ತುಳು ಚಿತ್ರರಂಗ ಬೆಳೆಯುತ್ತಿದೆ, ಈ ಬಗ್ಗೆ ಬೆಂಗಳೂರಿನಲ್ಲಿ ಚರ್ಚೆ ಆಗುತ್ತಿದೆ, ಇನ್ನಷ್ಟು ಬೆಳೆಯಲಿ, ಇನ್ನೂ ಹೆಚ್ಚಿನ ಥೀಯೇಟರ್ ನಲ್ಲಿ ತುಳು ಸಿನಿಮಾ ಬಿಡುಗಡೆಯಾಗಲಿ ಎಂದರು.
ಶುಭಾ ಪೂಂಜ ಜೊತೆ ಅವರ ಪತಿ ಸುಮಂತ್, ಪ್ರವೀಣ್ ಜವರೇ ಗೌಡ, ಚೈತ್ರ ಪ್ರವೀಣ್ ಇದ್ದರು.
PublicNext
10/01/2022 04:39 pm