ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬಹು ನಿರೀಕ್ಷಿತ ಚಿತ್ರ ಸೋಡಾ ಶರ್ಬತ್ ಚಿತ್ರದ ಬಿಡುಗಡೆ ಸಮಾರಂಭ

ಮಂಗಳೂರು: ಪಿಬಿಪಿ ಫಿಲಿಂಸ್ ಬ್ಯಾನರ್ ನಡಿ ಮೂಡಿಬಂದಿರುವ ಬಹು ನೀರಿಕ್ಷಿತ ಸೋಡಾ ಶರ್ಬತ್ ತುಳು ಚಿತ್ರದ ಬಿಡುಗಡೆ ಸಮಾರಂಭ ನಗರದ ಭಾರತ್ ಸಿನಿಮಾಸ್ ನಲ್ಲಿ ನಡೆಯಿತು. ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರು ದೀಪ ಬೆಳಗಿಸಿ ಚಿತ್ರಕ್ಕೆ ಶುಭ ಹಾರೈಸಿ ಆಶೀರ್ವಚನ ನೀಡಿದರು.

ಈ ವೇಳೆ ಚಿತ್ರದ ನಿರ್ದೇಶಕ ಪ್ರದೀಪ್ ಬಾರ್ಬೋಜಾ, ಉದ್ಯಮಿ ವಾಲ್ಟರ್ ನಂದಳಿಕೆ, ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಚಿತ್ರದ ನಟ ಹರ್ಷಿತ್ ಬಂಗೇರ, ಉಮೇಶ್ ಮಿಜಾರು ಮೊದಲಾದವರು ಉಪಸ್ಥಿತರಿದ್ದರು. ಹೊಸ ಪ್ರತಿಭೆ ಹರ್ಷಿತ್ ಬಂಗೇರ ಅವರು ನಾಯಕ ನಟನಾಗಿ ಅಭಿನಯಿಸಿದ್ದು, ರಂಜಿತಾ ಲೂವೀಸ್ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರ್ , ಉಮೇಶ್ ಮಿಜಾರು, ಪ್ರಸನ್ನ ಶೆಟ್ಟಿ ಬೈಲೂರು, ದೀಪಕ್ ರೈ ಪಾಣಾಜೆ , ರಮೇಶ್ ರೈ ಕುಕ್ಕುವಳ್ಳಿ, ಮೆಲ್ಲು ವೆಲೆನ್ಶಿಯಾ, ಲವೀನಾ ಫರ್ನಾಂಡೀಸ್, ಗೋಡ್ವಿನ್ ಬೆಳ್ಳೆ, ಸೇರಿದಂತೆ ಮೊದಲಾದವರು ನಟಿಸಿದ್ದಾರೆ.

ಚಿತ್ರಕ್ಕೆ ಗಣೇಶ್ ನೀರ್ಚಾಲ್ ಅವರು ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ಯಾಟ್ಸನ್ ಪಿರೇರಾ ಮಂಗಳೂರು ಅವರ ಸಂಗೀತ ನಿರ್ದೇಶನ, ತ್ಯಾಗರಾಜ್ ಮತ್ತು ನೀತು ನಿನದ್ ಹಿನ್ನಲೆ ಸಂಗೀತ ಈ ಚಿತ್ರಕ್ಕಿದೆ. ಎರಡು ಹಾಡುಗಳಿರುವ ಚಿತ್ರದಲ್ಲಿ ನಿಹಾಲ್ ತಾವ್ರೊ ಹಾಗೂ ದೇವದಾಸ್ ಕಾಪಿಕಾಡ್, ಭೋಜರಾಜ ವಾಮಂಜೂರು ಜೊತೆಗೂಡಿ ಹಾಡಿದ್ದಾರೆ.

ಉಮೇಶ್ ಮಿಜಾರು ಹಾಗೂ ಅಭಿಷೇಕ್ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ. ಮೂಡುಬಿದಿರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ನಡೆಸಲಾಗಿದೆ.ಸಾಲಗಾರನೊಬ್ಬ ಸಾಲದ ಸುಳಿಯಿಂದ ಯಾವ ರೀತಿ ಬಚಾವ್ ಆಗುತ್ತಾನೆ ಎಂಬ ಕಥೆ ಹಂದರವಿದ್ದು, ಪ್ರೀತಿ , ಪ್ರೇಮದ ಎಳೆಯೂ ಈ ಚಿತ್ರದಲ್ಲಿದೆ.

Edited By : Nagesh Gaonkar
Kshetra Samachara

Kshetra Samachara

30/12/2021 09:16 pm

Cinque Terre

21.8 K

Cinque Terre

1

ಸಂಬಂಧಿತ ಸುದ್ದಿ