ಮುಲ್ಕಿ: ಹಿಂದಿ ಚಲನಚಿತ್ರ ರಂಗದ ಖ್ಯಾತ ನಟ ಸುನಿಲ್ ಶೆಟ್ಟಿ ಮುಲ್ಕಿಯ ಪ್ರಸಿದ್ಧ ಶಿಮಂತೂರು ಆದಿ ಜನಾರ್ಧನ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.
ಅಭಿಮಾನಿಗಳು ಖ್ಯಾತ ಚಲನಚಿತ್ರ ನಟ ಸುನಿಲ್ ಶೆಟ್ಟಿ ಜೊತೆ ಸೆಲ್ಫಿ ಗಾಗಿ ಮುಗಿಬಿದ್ದರು. ಅಭಿಮಾನಿಗಳ ಈ ಕೋರಿಗೆಗೆ
ಸುನಿಲ್ ಶೆಟ್ಟಿ ಸಂತೋಷ ಪಟ್ಟು ಸೆಲ್ಫಿ ಮತ್ತು ಫೋಟೋಗಳನ್ನ ಕ್ಲಿಕ್ಕಿಸಿ ಕೊಂಡರು.
ಸುನಿಲ್ ಶೆಟ್ಟಿ ತಮ್ಮ ಮಗ ಆಹಾನ್ ಶೆಟ್ಟಿಯ ನೂತನ ಚಲನಚಿತ್ರ ಡಿಸೆಂಬರ್-03 ರಂದು ಬಿಡುಗಡೆಯಾಗಲಿದ್ದು ಯಶಸ್ಸಿಗಾಗಿ ಕರಾವಳಿಯ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.
ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯ ದಿನೇಶ್ಚಂದ್ರ ಅಜಿಲ, ಹರೀಶ್ ಶೆಟ್ಟಿ , ವೇಣುಗೋಪಾಲ ಶೆಟ್ಟಿ, ಕಿಶೋರ್ ಶೆಟ್ಟಿ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.
Kshetra Samachara
28/11/2021 04:51 pm