ಕಾರ್ಕಳ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದರೆ ದೊಡ್ಡವರಿಗೆ ಎಷ್ಟು ಇಷ್ಟವೋ ಮಕ್ಕಳಿಗೂ ಅಷ್ಟೇ ಅಚ್ಚುಮೆಚ್ಚು.
ರಿಯಾಲಿಟಿ ಶೋಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಪುನೀತ್ ಗೆ ಪ್ರತಿ ಮನೆಗಳಲ್ಲೂ ಫ್ಯಾನ್ಸ್ ಇದ್ದಾರೆ.
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಸಾಯಿರಾಜ್- ಶಿಲ್ಪಾ ದಂಪತಿಯ ಒಂದೂವರೆ ಹರೆಯದ ಮಗು 'ಶೌರ್ಯ' ಪುನೀತ್ ರಾಜ್ ಕುಮಾರ್ ಹಾಡು ಕೇಳಿದರೆ ಸಾಕು ಕುಣಿಯುವುದಕ್ಕೇ ಶುರು ಮಾಡಿ ಬಿಡುತ್ತಾನೆ!
ಯುವರತ್ನ ಸಿನಿಮಾದ 'ಫೀಲ್ ದ ಪವರ್...' ಹಾಡಿಗೆ ಶೌರ್ಯ ಕೋಟ್ಯಾನ್ ಕುಣಿದಿದ್ದಾನೆ. ಟಿವಿಯಲ್ಲಿ ಅಪ್ಪು ಅಭಿನಯಿಸಿರೋ ಯಾವ ಹಾಡು ಬಂದ್ರೂ ಶೌರ್ಯ ಟಿವಿ ಮುಂದೆ ಹಾಜರಾಗುತ್ತಾನಂತೆ! ಡ್ಯಾನ್ಸ್ ಅಪ್ಪು ಡ್ಯಾನ್ಸ್ ಹಾಡಿಗೂ ಈ ಪುಟಾಣಿ ಸಖತ್ ಹೆಜ್ಜೆ ಹಾಕಿದ್ದಾನೆ.
Kshetra Samachara
15/11/2021 04:56 pm