ಉಡುಪಿ: ಡಾ.ರಾಜ್ ಕುಮಾರ್ ಅಭಿಮಾನಿ ಬಳಗ ಹಾಗೂ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಪುನೀತ್ ರಾಜ್ ಕುಮಾರ್ ಅವರಿಗೆ 'ಭಾವಪೂರ್ಣ ಶ್ರದ್ಧಾಂಜಲಿ' ಮಾರುತಿ ವೀಥಿಕಾದಲ್ಲಿ ಇಂದು ನಡೆಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭ ಡಾ.ರಾಜ್ ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಒಳಕಾಡು ನಿತ್ಯಾನಂದ, ಕೊಟಕ್ ಮಹೇಂದ್ರ ಬ್ಯಾಂಕಿನ ಪ್ರಬಂಧಕ ಶ್ರೀನಿಧಿ ಮತ್ತು ಸಿಬ್ಬಂದಿ, ಸಾಮಾಜಿಕ ಮುಂದಾಳು ಕೆ.ಬಾಲಗಂಗಾಧರ ರಾವ್, ಪ್ರಸಾದ್ ಶೆಟ್ಟಿ, ಸುನಿಲ್ ಶೇಟ್, ಮೈತ್ರಿ ಮಹಮದ್, ಮಿತ್ರ ನರ್ಸಿಂಗ್ ಸ್ಕೂಲಿನ ಪ್ರಿನ್ಸಿಪಾಲ್ ನಿಶಾ ಪ್ರಶಾಂತ್, ಶಿಕ್ಷಕಿಯರಾದ ದಿವ್ಯ, ವನಿತಾ, ಹಾಗೂ ಮಿತ್ರ ನರ್ಸಿಂಗ್ ಸ್ಕೂಲಿನ ವಿದ್ಯಾರ್ಥಿಗಳು, ಪುನೀತ್ ಅಭಿಮಾನಿಗಳು ಭಾಗಿಯಾಗಿದ್ದರು.
Kshetra Samachara
08/11/2021 01:01 pm