ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: 'ಪುನೀತ್ ಮಾಮ ಬೇಕು..." ಪುಟಾಣಿ ಅಭಿಮಾನಿಯ ರೋದನ!

ಕಾರ್ಕಳ: ಅಕಾಲಿಕ ಮರಣಕ್ಕೆ ತುತ್ತಾಗಿ ಕೋಟ್ಯಂತರ ಜನರನ್ನು ಶೋಕಕ್ಕೆ ತಳ್ಳಿ ಮರೆಯಾದ ಪುನೀತ್ ರಾಜ್ ಕುಮಾರ್ ಅವರಿಗೆ ಎಲ್ಲ ವಯೋಮಾನದ ಅಭಿಮಾನಿಗಳಿದ್ದಾರೆ.ಕಾರ್ಕಳ ತಾಲೂಕಿನ ದಕ್ಷ್ ಎಂಬ ಪುಟಾಣಿಯೊಬ್ಬ "ಪುನೀತ್ ಮಾಮ ಬೇಕು..." ಎಂದು ಹೇಳುತ್ತಾ ಅಳುವ ವೀಡಿಯೊ ವೈರಲ್ ಆಗುತ್ತಿದೆ.

ಈ ಪುಟಾಣಿ ಟಿ.ವಿ.ಯಲ್ಲಿ ಸಾವಿನ ಸುದ್ದಿ ನೋಡಿ ಒಂದೇ ಸಮನೆ ಅಳುತ್ತಿದ್ದಾನೆ. ಮನೆಯವರು ಎಷ್ಟೇ ಸಮಾಧಾನ ಮಾಡಿದ್ರೂ ಈ ಹುಡುಗ ಮಾತ್ರ "ನನಗೆ ಪುನೀತ್ ಮಾಮನ ನೆನಪಾಗ್ತದೆ..." ಎಂದು ಅಳುತ್ತಾ ಹೇಳುತ್ತಿದ್ದಾನೆ.

ಮನೆಯವರು "ಹಾಗೆಲ್ಲ ಯೋಚಿಸಬಾರದು. ಅವರು ನಿಜವಾಗಿಯೂ ಸತ್ತಿಲ್ಲ. ಅದು ಸಿನಿಮಾ" ಎಂದು ಸಮಾಧಾನ ಪಡಿಸಲೆತ್ನಿಸಿದರೂ ಈ ಪುಟಾಣಿ ಮಾತ್ರ "ನನಗೆ ದುಃಖ ತಡೆಯಲು ಆಗುತ್ತಿಲ್ಲ" ಎಂದು ರೋದಿಸುತ್ತಿರುವುದು ಮನ ಮಿಡಿಯುವಂತಿದೆ.

Edited By : Manjunath H D
Kshetra Samachara

Kshetra Samachara

30/10/2021 05:58 pm

Cinque Terre

13.49 K

Cinque Terre

2