ಉಡುಪಿ: ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದಿಂದ ಅಗಲಿದ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರದ ಮಾರುತಿ ವೀಥಿಕಾದಲ್ಲಿ ಅಭಿಮಾನಿಗಳು ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಮಾತನಾಡಿದ ಅಭಿಮಾನಿ ಸಂಘದ ಮುಖಂಡ ಗಣೇಶ್ ರಾಜ್ , "ಪುನೀತ್ ರಾಜ್ ಕುಮಾರ್ ಕೇವಲ ಒಬ್ಬ ನಟ ಮಾತ್ರ ಅಲ್ಲ. ಹಲವು ಮಾನವೀಯ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಬಡವರಿಗಾಗಿ, ನಿರ್ಗತಿಕರಿಗಾಗಿ ಅವರು ಸದಾ ಮಿಡಿಯುತ್ತಿದ್ದರು. ಅವರ ಅಗಲಿಕೆ ಕರ್ನಾಟಕಕ್ಕೆ ತುಂಬಲಾರದ ನಷ್ಟ" ಎಂದು ಕಂಬನಿ ಮಿಡಿದರು.
Kshetra Samachara
30/10/2021 01:09 pm