ಉಡುಪಿ: ನವರಾತ್ರಿ ಹಬ್ಬದ ಕೊನೆ ದಿನ ಕೋಟಿಗೊಬ್ಬ - 3 ರಿಲೀಸಾಗಿದೆ. ಸಿನಿಮಾ ಕ್ರೇಝ್ ಕಡಿಮೆ ಇರುವ ಉಡುಪಿಯಲ್ಲಿ ಮೊದಲ ದಿನವೇ ಥಿಯೇಟರ್ ಹೌಸ್ ಫುಲ್ ಆಗಿದೆ. "ಅಣ್ಣನ ಚಿತ್ರ ಬಂತು... " ಎಂದು ಕಿಚ್ಚನ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಇಂದು ಬೆಳಿಗ್ಗೆನೇ ಸುದೀಪ್ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಅಲಂಕಾರ್ ಚಿತ್ರಮಂದಿರದ ಮುಂದೆ ಜಮಾಯಿಸಿದ್ದರು.
ಅಲಂಕಾರ್ ಥಿಯೇಟರ್ ಹೌಸ್ ಫುಲ್ ಆದ ಕಾರಣ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮೊದಲೇ ಚಿತ್ರ ಆರಂಭವಾಗಿದೆ. ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾಗಿದ್ದರೂ ಪ್ರೇಕ್ಷಕರಿಗೆ ಮಾಸ್ಕ್ , ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ.
Kshetra Samachara
15/10/2021 02:44 pm