ಮಂಗಳೂರು: ಕಿಚ್ಚ ಸುದೀಪ್ ಅಭಿನಯದ ʼಕೋಟಿಗೊಬ್ಬ- 3ʼ ಕನ್ನಡ ಸಿನಿಮಾ ರಾಜ್ಯದ ನಾನಾ ಕಡೆ ರದ್ದುಗೊಂಡ ಕಾರಣದಿಂದಾಗಿ ಮಂಗಳೂರಿನ ಸುಚಿತ್ರ ಚಿತ್ರಮಂದಿರದಲ್ಲೂ ಪ್ರದರ್ಶನ ರದ್ದಾಗಿದ್ದು, ಮಂಗಳೂರಿನ ʼಕಿಚ್ಚʼ ಅಭಿಮಾನಿಗಳು ನಿರಾಶೆಗೊಂಡರು.
ಥಿಯೇಟರ್ ಗೆ ಬಂದ ಸಿನಿಮಾ ಪ್ರೇಕ್ಷಕರು ಬಂದ ಹಾಗೆಯೇ ವಾಪಸ್ ಹೋದರು. ತಾಂತ್ರಿಕ ಕಾರಣದಿಂದ ಪಿಕ್ಚರ್ ರದ್ದುಗೊಂಡ ಬೋರ್ಡ್ ನೋಡಿ ನಿರಾಸೆಗೊಂಡರು. ಫಸ್ಟ್ ಶೋ ನಲ್ಲಿ ಸುಚಿತ್ರ ಚಿತ್ರಮಂದಿರ ಹೌಸ್ ಪುಲ್ ಆಗಿತ್ತು. ಬುಕ್ ಮೈ ಶೋ ಆ್ಯಪ್ ನಲ್ಲಿ 200 ಕ್ಕೂ ಅಧಿಕ ಮಂದಿ ಟಿಕೆಟ್ ಬುಕ್ಕಿಂಗ್ ಮಾಡಿದ್ದರು. ಎರಡನೇ ಶೋ ಬ್ಲಾಕ್ ಮಾಡಿ ಜನರನ್ನು ವಾಪಸು ಕಳಿಸಲಾಯಿತು.
Kshetra Samachara
14/10/2021 04:56 pm